", "articleSection": "Crime,Law and Order,Religion", "image": { "@type": "ImageObject", "url": "https://prod.cdn.publicnext.com/s3fs-public/286525-1757339131-WhatsApp-Image-2025-09-08-at-7.15.24-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ಧರ್ಮಸ್ಥಳ ಪ್ರಕರಣ ದಿನ ಕಳೆಯುತ್ತಿದ್ದಂತೆ ಹೊಸ ತಿರುವು ಪಡೆಯುತ್ತಿದೆ. ಇದೀಗ ಪ್ರಕರಣಕ್ಕೆ ಸ್ನೇಹಮಯಿ ಕೃಷ್ಣ ಎಂಟ್ರಿಯಾಗಿ ಹೊಸ ಬಾಂಬ್...Read more" } ", "keywords": "Snehamayi Krishna, Dharmasthala case, complaint filed, murder allegations, Vithal Gowda accused, Ananya Bhat disappearance, police investigation, SIT probe, Karnataka news updates, crime news, Dharmasthala temple controversy", "url": "https://dashboard.publicnext.com/node" } ಪ್ರಕರಣಕ್ಕೆ ಸ್ನೇಹಮಯಿ ಕೃಷ್ಣ ಎಂಟ್ರಿ : ಸೌಜನ್ಯಾಳನ್ನು ಕೊಂದದ್ದು ಆಕೆಯ ಮಾವ ವಿಠ್ಠಲ್ ಗೌಡ ಗಂಭೀರ ಆರೋಪ.!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಕರಣಕ್ಕೆ ಸ್ನೇಹಮಯಿ ಕೃಷ್ಣ ಎಂಟ್ರಿ : ಸೌಜನ್ಯಾಳನ್ನು ಕೊಂದದ್ದು ಆಕೆಯ ಮಾವ ವಿಠ್ಠಲ್ ಗೌಡ ಗಂಭೀರ ಆರೋಪ.!

ಮಂಗಳೂರು: ಧರ್ಮಸ್ಥಳ ಪ್ರಕರಣ ದಿನ ಕಳೆಯುತ್ತಿದ್ದಂತೆ ಹೊಸ ತಿರುವು ಪಡೆಯುತ್ತಿದೆ. ಇದೀಗ ಪ್ರಕರಣಕ್ಕೆ ಸ್ನೇಹಮಯಿ ಕೃಷ್ಣ ಎಂಟ್ರಿಯಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.

ಸೌಜನ್ಯಾ ಕೊಲೆಗೆ ಆಕೆಯ ಸೋದರಮಾವ ವಿಠ್ಠಲ್ ಗೌಡ ಕಾರಣ. ಈ ಬಗ್ಗೆ ನನ್ನಲ್ಲಿ ಇರುವ ಮಾಹಿತಿಯನ್ನು ಎಸ್‌ಪಿಗೆ ಕೊಡುತ್ತೇನೆ. ವಿಠ್ಠಲ್ ಗೌಡ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ.‌ ಸೌಜನ್ಯಾಳಿಗೆ ಲೈಂಗಿಕ ದೌರ್ಜನ್ಯ ನಡೆಸಲು ಹೋಗಿದ್ದ ವೇಳೆ ಆಕೆ ಕಿರುಚಾಡಿದಾಗ ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎಂದು ಆರೋಪಿಸಿದ್ದಾರೆ.

ಎಲ್ಲಾ ಸಾಕ್ಷಿಗಳನ್ನು ಆಧರಿಸಿ ಎಸ್‌ಪಿಗೆ ದೂರು ನೀಡುತ್ತಿದ್ದೇನೆ. ಸೌಜನ್ಯಾಳಿಗೆ ನ್ಯಾಯ ಸಿಗಬೇಕು. ವಿಠ್ಠಲ ಗೌಡ ಹಾಗೂ ಆತನಿಗೆ ಸಹಾಯ ಮಾಡಿದವರಿಗೆ ಶಿಕ್ಷೆಯಾಗಬೇಕು. ಬೇರೆಯವರು ರೇಪ್ ಮಾಡಿದ್ರೆ ಬೆನ್ನಿನಲ್ಲಿ ಬ್ಯಾಗ್ ಇರುತ್ತಿರಲಿಲ್ಲ. ಆಕೆಯ ಅತ್ಯಾಚಾರವಾದ ದಿನ ವಿಠ್ಠಲ ಗೌಡ ಹೋಟೆಲ್‌ಗೆ ರಜೆ ಹಾಕಿದ್ದ. ವಿಠಲ ಗೌಡನ ಮನೆಗೆ ಹೋದಾಗ ರೇಪ್ ಮಾಡಲು ಹೋಗಿದ್ದಾನೆ. ವಿಧಿ ವಿಜ್ಞಾನದವರು ಸರಿಯಾಗಿ ಬೆರಳಚ್ಚು ಪಡೆದಿಲ್ಲ. ಈ ಎಲ್ಲಾ ಸಾಕ್ಷಿ ಇಟ್ಟುಕೊಂಡು ವಿಠಲ ಗೌಡನ ತನಿಖೆ ಮಾಡಬೇಕು ಎಂದು ಸ್ನೇಹಮಯಿ ಕೃಷ್ಣ ಒತ್ತಾಯಿಸಿದ್ದಾರೆ.

Edited By : Shivu K
PublicNext

PublicNext

08/09/2025 07:17 pm

Cinque Terre

13.13 K

Cinque Terre

13

ಸಂಬಂಧಿತ ಸುದ್ದಿ