", "articleSection": "Public Feed,News,Public News", "image": { "@type": "ImageObject", "url": "https://prod.cdn.publicnext.com/s3fs-public/463655-1756991687-manjunath---2025-09-04T184442.834.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "RuderegowdaGadag" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ಜಿಲ್ಲಾಸ್ಪತ್ರೆಗಳಿಗೆ ಉತ್ತಮ ಸೌಕರ್ಯ ಒದಗಿಸುತ್ತಿರುವುದಾಗಿ ರಾಜ್ಯ ಸರ್ಕಾರ ಹೇಳುತ್ತದೆ. ಮತ್ತೊಂದೆಡೆ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ...Read more" } ", "keywords": "Soruva JIMS Hospital, Banantiyaru, Naraka darshana, Bed mele", "url": "https://dashboard.publicnext.com/node" } ಸೋರುವ ಜಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ನರಕ ದರ್ಶನ : ಬೆಡ್‌ಗಳ ಮೇಲೆ ಮಳೆ ನೀರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೋರುವ ಜಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ನರಕ ದರ್ಶನ : ಬೆಡ್‌ಗಳ ಮೇಲೆ ಮಳೆ ನೀರು

ಗದಗ: ಜಿಲ್ಲಾಸ್ಪತ್ರೆಗಳಿಗೆ ಉತ್ತಮ ಸೌಕರ್ಯ ಒದಗಿಸುತ್ತಿರುವುದಾಗಿ ರಾಜ್ಯ ಸರ್ಕಾರ ಹೇಳುತ್ತದೆ. ಮತ್ತೊಂದೆಡೆ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶಿಥಿಲಗೊಂಡಿದ್ದು, ಬಾನಂಣತಿಯರು, ಶಿಶುಗಳಿಗೆ ಸಮಸ್ಯೆ ಆಗುತ್ತಿದೆ.

ರೋಗಿಗಳು, ಸಾರ್ವಜನಿಕರು ಇಲ್ಲಿ ನರಕ ಅನುಭವಿಸುವಂತಾಗಿದೆ. ವಾರ್ಡ್‌ಗಳಲ್ಲಿ ಬೆಡ್‌ಗಳ ಮೇಲೆ ಸಹ ಮಳೆ ನೀರು ನಿಂತಿದೆ.

ಇದೇ ವಿಚಾರವಾಗಿ ಜೆಡಿಎಸ್ ಟ್ವೀಟ್ ಮಾಡಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ರಾಜ್ಯ ಆರೋಗ್ಯ ಇಲಾಖೆಯನ್ನು ಹದಗೆಡೆಸಿದ್ದಾರೆ. ಗದಗ ಜಿಲ್ಲೆಯ ಜಿಮ್ಸ್‌ ಆಸ್ಪತ್ರೆ ಕಟ್ಟಡ ಸಣ್ಣ ಮಳೆಗೆ ಸೋರುತ್ತಿದೆ. ಬಾಣಂತಿಯರು ಹಾಗೂ ನವಜಾತ ಶಿಶುಗಳ ವಾರ್ಡ್‌ನಲ್ಲಿ ಮಳೆ ನೀರು ತುಂಬಿದೆ. ರೋಗಿಗಳು ಈ ಆಸ್ಪತ್ರೆಯಲ್ಲಿ ನಿತ್ಯ ನರಕ ಅನುಭವಿಸುತ್ತಿದ್ದಾರೆ. ಆರೋಗ್ಯ ಸಚಿವರೇ, ಇಲ್ಲಿ ಕನಿಷ್ಠ ಮೂಲಸೌಕರ್ಯ ಕಲ್ಪಿಸುವ ಮೂಲಕ ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಿಬೇಕು ಎಂದು ಆಗ್ರಹಿಸಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಅದಕ್ಷ ಆಡಳಿತದಲ್ಲಿ ಸರ್ಕಾರಿ ಆಸ್ಪತ್ರೆಗಳು ಅವ್ಯವಸ್ಥೆಯ ಗೂಡಾಗಿವೆ ಎಂದು ಸರ್ಕಾರ ಹಾಗೂ ಆರೋಗ್ಯ ಸಚಿವರನ್ನು ತರಾಟೆಗೆ ತೆಗೆದುಕೊಂಡಿದೆ.

ಮಾತ್ರವಲ್ಲದೇ ಕೇರಳದಲ್ಲಿ ನೆರೆಹಾನಿಯಾದರೇ ಹತ್ತಾರು ಕೋಟಿ ತಕ್ಷಣವೇ ಬಿಡುಗಡೆ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಮ್ಮ ರಾಜ್ಯದ ಸರ್ಕಾರಿ ಶಾಲೆಗಳ ದುಸ್ಥಿತಿ ಬಗ್ಗೆ ಯಾಕಿಷ್ಟು ತಾತ್ಸರ ಹೊಂದಿದ್ದಾರೆ?. ವಿದ್ಯಾಮಂತ್ರಿ ಮಧು ಬಂಗಾರಪ್ಪ ಅವರೇ ಬಡವರ ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ? ಎಂದು ಜೆಡಿಎಸ್ ಪ್ರಶ್ನಿಸಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪದ ಗಜಗಿಹಾಳು ಸರ್ಕಾರಿ ಶಾಲೆ ದುಸ್ತಿತಿ ವಿರುದ್ಧ ಕಿಡಿ ಕಾರಿದೆ.

Edited By :
Kshetra Samachara

Kshetra Samachara

04/09/2025 06:44 pm

Cinque Terre

19.18 K

Cinque Terre

0