ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಸೌಹಾರ್ದ ಗಣಪತಿಯ ಅದ್ಧೂರಿ ಮೆರವಣಿಗೆ

ಕಾರವಾರ: ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ನಗರದ ಕೋಣೆವಾಡದ ಗಣೇಶನ ಮೂರ್ತಿಯನ್ನು ಗುರುವಾರ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಯಿತು.

ಸಂಜೆಯ ವೇಳೆಗೆ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಒಟ್ಟಾಗಿ ಗಣಪತಿ ಮೆರವಣಿಗೆಯನ್ನು ಸಜ್ಜುಗೊಳಿಸಿದರು. ಕೋಣೆವಾಡದ ಎಲ್ಲಾ ಸಮುದಾಯದ ಯುವಕರು, ಯುವತಿಯರು ಒಂದೇ ಬಣ್ಣದ ಸಮವಸ್ತç ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ ಹಾಗೂ ಧ್ವನಿವರ್ಧಕದ ಮೂಲಕ ಮೆರವಣಿಗೆ ಸಾಗಿತು. ದಾರಿಯುದ್ದಕ್ಕೂ ಹಿಂದೂ ಹಾಗೂ ಮುಸ್ಲಿಂ ಯುವಕರು ಕೈಕೈ ಹಿಡಿದುಕೊಂಡು ಹಾಡಿಗೆ ಹೆಜ್ಜೆ ಹಾಕಿದರು. ನಗರದ ಮುಖ್ಯ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಗೆ ಸಣ್ಣ ಮಳೆಯು ಅಡ್ಡಿಯಾದರೂ ಸಾಂಗವಾಗಿ ಸಾಗಿತು. ಬಳಿಕ ಟ್ಯಾಗೋರ್ ಕಡಲ ತೀರದಲ್ಲಿ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿ ವಿಸರ್ಜನೆ ಮಾಡಲಾಯಿತು.

Edited By : PublicNext Desk
Kshetra Samachara

Kshetra Samachara

04/09/2025 08:12 pm

Cinque Terre

2.8 K

Cinque Terre

0

ಸಂಬಂಧಿತ ಸುದ್ದಿ