ಕಾರವಾರ: ನಗರದಲ್ಲಿ ಶುಕ್ರವಾರ ಮುಸ್ಲಿಂ ಭಾಂದವರು ಶೃದ್ಧಾ ಭಕ್ತಿಯಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಿ ಮೆರವಣಿಗೆ ನಡೆಸಿದರು.
ಈದ್ ಮಿಲಾದ ಹಬ್ಬದ ಹಿನ್ನೆಲೆ ನಡೆದ ಮೆರವಣಿಗೆಯು ಇಲ್ಲಿನ ಕೋಣೆವಾಡದ ಜಾಮಿಯಾ ಮಸೀದಿಯಿಂದ ಪ್ರಾರಂಭಗೊಂಡಿತು. ಬಳಿಕ ಹೈ ಚರ್ಚ್ ರಸ್ತೆ, ಸವಿತಾ ವೃತ್ತ, ಸುಭಾಷ ವೃತ್ತ ಮಾರ್ಗವಾಗಿ ಸಾಗಿತು. ಇಲ್ಲಿನ ಗ್ರೀನ್ ಸ್ಟ್ರೀಟ್ ರಸ್ತೆ ಮೂಲಕ ಕಾಜುಭಾಗ ರಸ್ತೆಯಿಂದ ಮಹಾಸತಿ ಕಲ್ಯಾಣ ಮಂಟಪದ ಬಳಿ ಸಮಾಪ್ತಿಗೊಂಡಿತು. ಶುಭ್ರ ಉಡುಪುಗಳನ್ನು ತೊಟ್ಟು ಬಂದ ಸಾವಿರಾರು ಮುಸ್ಲಿಂ ಬಾಂಧವರು ಪರಸ್ಪರ ಅಪ್ಪಿಕೊಂಡು ಹಬ್ಬದ ಶುಭಾಷಯವನ್ನು ವಿನಿಮಯ ಮಾಡಿಕೊಂಡರು. ಮೆರವಣಿಗೆಯಲ್ಲಿ ಮೆಕ್ಕಾದ ಸ್ತಬ್ದ ಚಿತ್ರಗಳು ಗಮನ ಸೆಳೆದವು. ಬೈಕ್, ಆಟೋ ಹಾಗೂ ಕಾಲ್ನಡಿಗೆಯಲ್ಲಿ ಪಾಲ್ಗೊಂಡವರು ಧ್ವಜ ಹಿಡಿದು ಘೋಷಣೆಗಳನ್ನು ಕೂಗಿದರು. ಮೆರವಣಿಗೆಯುದ್ದಕ್ಕೂ ದೇವರ ಸ್ತೋತ್ರಗಳು ಮೊಳಗಿದವವು. ಬಳಿಕ ಇಲ್ಲಿನ ಮಹಾಸತಿ ಕಲ್ಯಾಣ ಮಂಟಪ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾನ ಹಾಗೂ ಮಕ್ಕಳಿಂದ ಭಾಷಣ ಕಾರ್ಯಕ್ರಮ ನಡೆದವು. ವಿವಿಧ ಮಸೀದಿಗಳಲ್ಲಿ ಕಾರ್ಯಕ್ರಮಗಳು ನಡೆದವು.
Kshetra Samachara
05/09/2025 06:36 pm