ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಗಣೇಶ ಉತ್ಸವ ಅದ್ದೂರಿಯಿಂದ ಸಂಪನ್ನಗೊಂಡಿದೆ. ಕಳೆದ 11 ದಿನಗಳಿಂದ ಪೂಜಿಸಿದ ಗಣಪನನ್ನ ಸಹಸ್ರಾರು ಸಂಖ್ಯೆಯ ಭಕ್ತರು ಬೃಹತ್ ಮೆರವಣಿಗೆ ನಡೆಸೋ ಮೂಲಕ ಅರಬ್ಬಿ ಸಮುದ್ರದಲ್ಲಿ ಜಲಸ್ಥಂಭನಗೊಳಿಸಿದ್ರು. ವಿವಿಧ ಸಾಂಪ್ರದಾಯಿಕ ವಾದ್ಯ ಮೇಳಗಳು ಮೆರವಣಿಗೆಗೆ ಕಳೆ ನೀಡಿದವು.
ಸಾಂಪ್ರದಾಯಿಕ ವಿಶೇಷ ವಾದ್ಯಗಳೊಂದಿಗೆ ಗಣೇಶ ಮೂರ್ತಿಯ ಮೆರವಣಿಗೆ ನಡೆಸಿದ್ರು. ಮೆರವಣಿಗೆ ಸಾಗುವ ರಸ್ತೆಯ ಉದ್ದಗಲಕ್ಕೂ ಸಹಸ್ರಾರು ಸಂಖ್ಯೆಯ ಭಕ್ತರು ನೆರೆದಿದ್ದರು. ಉತ್ಸವದ 11 ದಿನಗಳ ಕಾಲ ಗಣೇಶನ ದರ್ಶನಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ನೀಡುವ ಮೂಲಕ ಸೇವೆ ನೀಡಿದ್ರು. ಮಹಿಳೆಯರು ಕೂಡ ಗಣೇಶನ ಮುಂದೆ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ವಾದ್ಯ ಮೇಳಗಳಿಗೆ ಹೆಜ್ಜೆ ಹಾಕಿದ್ರು.
ಭಜನೆ, ಸಂಗೀತ ಕಾರ್ಯಕ್ರಮಗಳ ಮೂಲಕ ಗಜಾನನಿಗೆ ವಂದಿಸಿದರು. ಈ ಬಾರೀ ಸರ್ಕಾರ ಡಿಜೆಗೆ ಅವಕಾಶ ನೀಡದೇ ಇರೋದ್ರಿಂದ ಸಾಂಪ್ರದಾಯಿಕ ವಾದ್ಯಗಳೆ ಹೆಚ್ಚಾಗಿ ಗಮನ ಸೆಳೆಯಿತು. ಕಾರವಾರದ ವಿವಿಧ ಭಾಗಗಳ ಗಣೇಶನನ್ನ ಆಯಾ ಉತ್ಸವ ಸಮಿತಿಯವರು ಬೃಹತ್ ಮೆರವಣಿಗೆಯಲ್ಲಿ ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರ, ಅಲಿಗದ್ದಾ ಕಡಲತೀರದಲ್ಲಿ ಜಲಸ್ತಂಭನಗೊಳಿಸಿದರು. ಜಾತಿ, ಧರ್ಮ ಬೇಧವಿಲ್ಲದೇ ಸಹಸ್ರಾರು ಸಂಖ್ಯೆಯ ಭಕ್ತರು ಪಾಲ್ಗೊಂಡು ದೇವರಲ್ಲಿ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.
PublicNext
06/09/2025 07:33 pm