", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/38659820250905083628filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "KumarTumakur" }, "editor": { "@type": "Person", "name": "9844461373" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ತುಮಕೂರು: ತುಮಕೂರಿನಲ್ಲಿ ಸೆಪ್ಟೆಂಬರ್ 22 ರಿಂದ ಜರುಗಲಿರುವ ಅದ್ದೂರಿ ದಸರಾ ಉತ್ಸವ-2025 ರ ಪ್ರಯುಕ್ತ ನಡೆಯಲಿರುವ ಯುವ ದಸರಾ ಉತ್ಸವದಲ್ಲಿ ಇಲಾಖ...Read more" } ", "keywords": "Node", "url": "https://dashboard.publicnext.com/node" } ತುಮಕೂರು: ದಸರಾ ಉತ್ಸವ - ವಸ್ತು ಪ್ರದರ್ಶನದ ಮಾದರಿಗಳು ಮಾಲ್ಯಯುತವಾಗಿರಲಿ ಜಿ.ಪಂ ಸಿಇಒ - ಜಿ.ಪ್ರಭು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ದಸರಾ ಉತ್ಸವ - ವಸ್ತು ಪ್ರದರ್ಶನದ ಮಾದರಿಗಳು ಮಾಲ್ಯಯುತವಾಗಿರಲಿ ಜಿ.ಪಂ ಸಿಇಒ - ಜಿ.ಪ್ರಭು

ತುಮಕೂರು: ತುಮಕೂರಿನಲ್ಲಿ ಸೆಪ್ಟೆಂಬರ್ 22 ರಿಂದ ಜರುಗಲಿರುವ ಅದ್ದೂರಿ ದಸರಾ ಉತ್ಸವ-2025 ರ ಪ್ರಯುಕ್ತ ನಡೆಯಲಿರುವ ಯುವ ದಸರಾ ಉತ್ಸವದಲ್ಲಿ ಇಲಾಖಾವಾರು ಪ್ರದರ್ಶನಗೊಳ್ಳುವ ವಸ್ತುಪ್ರದರ್ಶನದ ಮಾದರಿಗಳು ಮಾಲ್ಯಯುತವಾಗಿರಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜಿಲ್ಲಾ ಪಂಚಾಯತ್ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿ ನಡೆದ ದಸರಾ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಇಲಾಖೆಯಲ್ಲಿರುವ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತೆ ವಸ್ತು ಪ್ರದರ್ಶನ ಮಾದರಿಗಳನ್ನು ಸಿದ್ಧಪಡಿಸಲು ಕೃಷಿ ಜಂಟಿ ನಿರ್ದೇಶಕ ರಮೇಶ್ ಅವರಿಗೆ ಸೂಚಿಸಿದರು.

ರೇಷ್ಮೆ ಸೀರೆ ತಯಾರಿಕೆಯ ಮಾದರಿ ಗ್ಯಾಲರಿ, ಜಿಲ್ಲೆಯ ಪ್ರವಾಸಿ ತಾಣಗಳ ಮಾದರಿ, ಶಾಲಾ-ಕಾಲೇಜು ಮಕ್ಕಳಿಗೆ ಜ್ಞಾನ ಹೆಚ್ಚಿಸುವಂತಹ ಹಾಗೂ ಪ್ರೇರಣೆ ನೀಡುವ ಪುಸ್ತಕಗಳು, ಕನ್ನಡ ನಾಡಿನ ಪ್ರತಿಷ್ಠಿತ ಕವಿಗಳ ಕೃತಿಗಳು, ಕಥೆ, ಕವನ, ಕಾದಂಬರಿ ಮತ್ತು ನಾಟಕಗಳ ಪುಸ್ತಕಗಳು ಪ್ರದರ್ಶನದಲ್ಲಿ ಇರಬೇಕೆಂದು ತಿಳಿಸಿದರು. ಜೊತೆಗೆ ತುಮಕೂರಿನ ಹೆಸರಾಂತ ಕವಿಗಳ ಕೃತಿಗಳನ್ನು ವಿಶೇಷ ಗ್ಯಾಲರಿಯಲ್ಲಿ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅರಣ್ಯ ಇಲಾಖೆಯಿಂದ ಸಿದ್ದರಬೆಟ್ಟ ಮಾದರಿ, ವಿಜ್ಞಾನ ಪ್ರದರ್ಶನ, ಪ್ರಕೃತಿ ಮತ್ತು ವನ್ಯಜೀವಿ ಗ್ಯಾಲರಿ, ಚಿತ್ರಕಲಾ ಹಾಗೂ ಸ್ವಾತಂತ್ರ‍್ಯ ಹೋರಾಟಗಾರರ ಫೋಟೋ ಗ್ಯಾಲರಿಗಳು ಕೂಡ ಪ್ರದರ್ಶನದಲ್ಲಿರಬೇಕು. ನಮ್ಮ ಜಿಲ್ಲೆಯಿಂದ 160 ದೇಶಗಳಿಗೆ ರಫ್ತು ಮಾಡುತ್ತಿರುವ ವಸ್ತುಗಳನ್ನೂ ಪ್ರದರ್ಶನದಲ್ಲಿ ಇರಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಈಶ್ವರಪ್ಪ ಹಾಗೂ ಸಂಜೀವಪ್ಪ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಾರದಮ್ಮ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸಿದ್ದರಾಜು, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

05/09/2025 08:36 am

Cinque Terre

880

Cinque Terre

0

ಸಂಬಂಧಿತ ಸುದ್ದಿ