", "articleSection": "Politics,Infrastructure,News,Agriculture", "image": { "@type": "ImageObject", "url": "https://prod.cdn.publicnext.com/s3fs-public/421698-1757065205-download.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಇದರಿಂದ ಸಂಕಷ್ಟದಲ್ಲಿರುವ ರೈತರೊಂದಿ...Read more" } ", "keywords": "Belagavi,BJP leaders,rain-damaged crops,crop inspection,monsoon damage,local news,Karnataka,farmers' issues,political visit", "url": "https://dashboard.publicnext.com/node" } ಬೆಳಗಾವಿ: ಮಳೆಯಿಂದ ಹಾನಿಯಾದ ಬೆಳೆ ವೀಕ್ಷಿಸಿದ ಬಿಜಿಪಿ ನಾಯಕರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಮಳೆಯಿಂದ ಹಾನಿಯಾದ ಬೆಳೆ ವೀಕ್ಷಿಸಿದ ಬಿಜಿಪಿ ನಾಯಕರು

ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಇದರಿಂದ ಸಂಕಷ್ಟದಲ್ಲಿರುವ ರೈತರೊಂದಿಗೆ ಹಾನಿಗೊಳಗಾದ ಬೆಳೆಗಳನ್ನು ಜಿಲ್ಲಾ ಬಿಜೆಪಿ ನಿಯೋಗ ವೀಕ್ಷಿಣೆ ಮಾಡಿದೆ.

ಈ ಸಂದರ್ಭದಲ್ಲಿ ರೈತರು ಮಾತನಾಡಿ, ಇಲ್ಲಿಯವರೆಗೆ ಅಧಿಕಾರಿಗಳು, ಶಾಸಕರು, ಸಚಿವರು ರೈತರ ಕಷ್ಟಗಳನ್ನು ಕೇಳಿಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕಿದರು. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಅತಿವೃಷ್ಟಿಯಿಂದ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಹೆಸರು, ಗೋವಿನಜೋಳ, ಉದ್ದು, ಕಬ್ಬು, ಸೋಯಾಬಿನ, ಈರುಳ್ಳಿ ಮುಂತಾದ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿ, ಹಲವಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಈ ಪೈಕಿ ಸವದತ್ತಿ ತಾಲೂಕಿನಲ್ಲಿ ವಾಸ್ತವಿಕ ಸಮೀಕ್ಷೆ ನಡೆಸಿ, SDRF ನಿಧಿಯಿಂದ ತಕ್ಷಣ ಪರಿಹಾರ ವಿತರಿಸುವಂತೆ ಸವದತ್ತಿ ತಹಶೀಲ್ದಾರ್‌ ಮುಖಾಂತರ ಮುಖ್ಯಮಂತ್ರಿಯವರೆಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾದ್ಯಕ್ಷ ಸುಭಾಸ ಪಾಟೀಲ್, ಮಂಡಲ ಅಧ್ಯಕ್ಷ ವಿರೂಪಾಕ್ಷಪ್ಪ ಮಾಮನಿ, ಜಗದೀಶ ಕೌಜಗೇರಿ, ಪುಂಡಲೀಕ ಮಾದರ, ಕುಮಾರಸ್ವಾಮಿ ತಲ್ಲೂರಮಠ, ಈರಯ್ಯ ಪಾಟೀಲ, ನಿಂಗಪ್ಪ ಮೀಶಿ, ಭರಮಪ್ಪ ಅಣ್ಣಿಗೇರಿ, ಅರ್ಜುನ ಅಮೋಜಿ, ಗೀರಿಶ ಬೀಳಗಿ, ಮಲ್ಲಿಕಾರ್ಜುನ ಬೀಳಗಿ, ರವಿ ಬ್ಯಾಹಟ್ಟಿ, ಶೇಖರ ಗೋಕಾವಿ, ಮಹಾದೇವ ಮುರಗೋಡ, ರಾಜು ಸಾಲಿಮಠ, ಸಚಿನ ಕಡಿ, ರಾಜು ಲಮಾಣಿ, ಜಮೀಲ ಲಕ್ಷ್ಮೇಶ್ವರ ಸಿಂಗಪ್ಪ ಚಿನಿವಾಲರ, ವೀರು ಗುಡೆನ್ನವರ, ಮಂಜು ಉಳ್ಳಿಗೇರಿ, ವಾಸು ಬಾಹ್ಯಟ್ಟಿ ಹಾಗೂ ಹಲವಾರು ರೈತರು, ರೈತ ಮುಖಂಡರು ಉಪಸ್ಥಿತರಿದ್ದರು.

Edited By : Suman K
Kshetra Samachara

Kshetra Samachara

05/09/2025 03:10 pm

Cinque Terre

6.76 K

Cinque Terre

0

ಸಂಬಂಧಿತ ಸುದ್ದಿ