", "articleSection": "Infrastructure,Government,News,Agriculture", "image": { "@type": "ImageObject", "url": "https://prod.cdn.publicnext.com/s3fs-public/421698-1757066369-012~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "UpparChikkodi" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕೋಡಿ: ರಾಯಬಾಗ ತಾಲೂಕಿನ ಬಾವನ ಸೌಂದತ್ತಿ ಮತ್ತು ಚಿಂಚಲಿ ಜಾಕ್ವೆಲ್‌ದಿಂದ ತಾಲೂಕಿನ 58 ಕೆರೆಗಳನ್ನು ತುಂಬಿಸುವ ಕಾಮಗಾರಿ ಶೀಘ್ರ ಪೂರ್ಣಗೊಳಿ...Read more" } ", "keywords": "lake filling project,complete quickly,farmers protest,fierce protest,irrigation project,water scarcity,local news,Karnataka", "url": "https://dashboard.publicnext.com/node" }
ಚಿಕ್ಕೋಡಿ: ರಾಯಬಾಗ ತಾಲೂಕಿನ ಬಾವನ ಸೌಂದತ್ತಿ ಮತ್ತು ಚಿಂಚಲಿ ಜಾಕ್ವೆಲ್‌ದಿಂದ ತಾಲೂಕಿನ 58 ಕೆರೆಗಳನ್ನು ತುಂಬಿಸುವ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ, ಕೆರೆಗಳನ್ನು ತುಂಬಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಮತ್ತು ರೈತರು ಜಿಲ್ಲಾಧಿಕಾರಿ ಮೊಹಮ್ಮದ ರೋಷನ ಅವರಿಗೆ ಮನವಿ ಸಲ್ಲಿಸಿದರು.
ರಾಯಬಾಗ ಪಟ್ಟಣದ ಝೇಂಡಾ ಕಟ್ಟೆ ಹತ್ತಿರ ರೈತರು ಹಸು, ಚಕ್ಕಡಿ ಗಾಡಿ ಮತ್ತು ಕುರಿ ಆಡುಗಳೊಂದಿಗೆ ಆಗಮಿಸಿ ರಸ್ತೆಯನ್ನು ಬಂದ ಮಾಡಿ ಉಗ್ರ ಪ್ರತಿಭಟನೆ ನಡೆಸಿದರು. ಸುಮಾರು 5 ಗಂಟೆಗಳ ಕಾಲ ಹಾರೂಗೇರಿ-ರಾಯಬಾಗ-ಚಿಕ್ಕೋಡಿ ರಸ್ತೆ ಬಂದ ಮಾಡಿದ್ದರಿಂದ ಪ್ರಯಾಣಿಕರು, ವಾಹನ ಸವಾರರು ಪರದಾಡುವಂತಾಯಿತು.
ಬಳಿಕ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ, ತಾಲೂಕಿನ ರಾಯಬಾಗ ಮತ್ತು ಕುಡಚಿ ಮತ ಕ್ಷೇತ್ರಗಳ ೫೮ ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಿ 7 ವರ್ಷಗಳು ಕಳೆದರೂ, ಇನ್ನುವರೆಗೂ ಕಾಮಗಾರಿಯನ್ನು ಪೂರ್ಣಗೊಳಿಸದೇ ಸರ್ಕಾರ ಕಾಲಹರಣ ಮಾಡುತ್ತಿರುವುದರಿಂದ ಮಳೆ ಆಶ್ರಿತ ಪ್ರದೇಶಗಳಲ್ಲಿನ ಜನಜಾನುವರುಗಳಿಗೆ ಮತ್ತು ರೈತರ ಕೃಷಿ ಭೂಮಿಗೆ ತುಂಬ ತೊಂದರೆಯಾಗುತ್ತಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದರು.
ಕೆರೆ ತುಂಬು ಯೋಜನೆ ಶೀಘ್ರವಾಗಿ ಪೂರ್ಣಗೊಳಿಸಲು ಒತ್ತಾಯಿಸಿ ಈಗಾಗಲೇ ಎರಡು ಬಾರಿ ರೈತ ಸಂಘದಿಂದ ಧರಣಿ ಹೋರಾಟ ನಡೆಸಿದರೂ ಇನ್ನುವರೆಗೂ ಯೋಜನೆ ಪೂರ್ಣಗೊಳ್ಳದೇ ಇರುವುದು ಅತ್ಯಂತ ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆರೆ ತುಂಬು ಯೋಜನೆ ಪೂರ್ಣಗೊಳಿಸಿ, ಕೆರೆಗಳಿಗೆ ನೀರು ತುಂಬಿಸಿದರೆ ಅಂತರಜಲಮಟ್ಟ ಹೆಚ್ಚಾಗಿ ನೀರಿನ ತೊಂದರೆ ಬಗೆಹರಿಸಬಹುದು ಮತ್ತು ರೈತರಿಗೆ ಜನ ಜಾನುವಾರುಗಳಿಗೆ ನೀರಿನ ಶಾಶ್ವತ ಪರಿಹಾರ ಆಗಲಿದೆ ಎಂದರು.
10 ದಿನಗಳಲ್ಲಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಕೆರೆ ತುಂಬುವ ಯೋಜನೆ ಜಾಕ್ವೆಲ್‌ಗಳಿಗೆ ಭೇಡಿ ನೀಡಿ ಪರೀಶಿಲನೆ ನಡೆಸಿ, ಕೆರೆ ತುಂಬುವ ಯೋಜನೆ ಪ್ರಾರಂಭಿಸಲು ಅಧಿಕಾರಿಗಳ ಜೊತೆ ಚರ್ಚಿಸಿ ಶೀಘ್ರವಾಗಿ ಸೂಕ್ತವಾಗಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಸ್. ಡಿ. ಮಲ್ಲಾಪೂರ, ರಮೇಶ ಕಲ್ಹಾರ, ಪರಸಪ್ಪ ಚಿನಗುಂಡಿ, ಮಲ್ಲಪ್ಪ ಅಂಗಡಿ, ನಿಂಗಪ್ಪ ಪಕಾಂಡಿ, ವಿಜಯ ನಾಯಿಕ, ನಿಂಗಪ್ಪ ಪಾತ್ರೋಟ, ಅಜೀತ್ ಜಾಧವ ಸೇರಿ ನೂರಾರು ರೈತರು ಭಾಗವಹಿಸಿದ್ದರು.
Kshetra Samachara
05/09/2025 03:30 pm