ಸಿದ್ದಾಪುರ : ಉತ್ತರ ಕನ್ನಡ ಜಿಲ್ಲಾ ರೈತ ಸಂಘದಿಂದ ರಸ್ತೆಯಲ್ಲಿ ಗಿಡ ನೆಟ್ಟು ಪ್ರತಿಭಟನೆ ನಡೆಸಿದರು. ಸಿದ್ದಾಪುರ ಪಟ್ಟಣ ವ್ಯಾಪ್ತಿಯ ಹಾಳದ ಕಟ್ಟಾದಲ್ಲಿ ಪ್ರತಿಭಟನೆ ನಡೆಸಿ ತಾಲೂಕಿನಲ್ಲಿ ವಾಹನ ಸವಾರರು ರಸ್ತೆಯಲ್ಲಿನ ಹೊಂಡ ಗುಂಡಿಗಳಿಂದ ವಾಹನದಲ್ಲಿ ಓಡಾಟ ಮಾಡದಂತಾಗಿದೆ, ಪತ್ರಿಕೆ ಮಾಧ್ಯಮದಲ್ಲಿ ಸಾಕಷ್ಟು ಸಾರಿ ಈ ಬಗ್ಗೆ ವರದಿ ಬಂದರೂ, ಮನವಿ ನೀಡಿದರು ಇಲ್ಲಿನ ಶಾಸಕರು ನಿರ್ಲಕ್ಷ ವಹಿಸಿದ್ದಾರೆ ಎಂದು ಆರೋಪಿಸಿದರು.
ರೈತ ಮುಖಂಡ ಜೆಡಿಎಸ್ ನಾಯಕ ಇಲಿಯಾಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ರಸ್ತೆಯಲ್ಲಿನ ಹೊಂಡ ಗುಂಡಿ ಮುಚ್ಚಿ ಸರಿ ಪಡಿಸದಿದ್ದರೆ ಕಪ್ಪು ಪಟ್ಟಿ ಧರಸಿ, ಶಾಸಕರ ವಾಹನ ತಡೆದು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆರಿಯಪ್ಪ ನಾಯ್ಕ್,ಜಿ ಸಿ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
05/09/2025 03:35 pm