ಶಿರಸಿ: ತಾಲೂಕಿನ ಬೆಣ್ಣೆಹೊಳೆ ಫಾಲ್ಸ್‌ಗೆ ತೆರಳಿದ್ದ ಅರಣ್ಯ ಮಹಾವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ಕಾಲು ಜಾರಿ ನೀರಿಗೆ ಬಿದ್ದಿದ್ದು, ರಾಹುಲ್ ಎಂಬ ವಿದ್ಯಾರ್ಥಿ ಕಾಣೆಯಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಕಾಣೆಯಾದ ರಾಹುಲ್ ಪತ್ತೆಗಾಗಿ ಶೋಧ ಕಾರ್ಯ ಭರದಿಂದ ಸಾಗುತ್ತಿದೆ. ಸದ್ಯ ಮಾರಿಕಾಂಬಾ ಲೈಫ್‌ಗಾರ್ಡ್ ತಂಡ, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳದಲ್ಲಿ ಮುಕ್ಕಾಮು ಹೂಡಿ ಸೋಮವಾರ ಬೆಳಗ್ಗೆಯಿಂದಲೇ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಆದರೆ ನೀರಿನ ಒಳ ಹರಿವು ಹೆಚ್ಚಿರುವುದರಿಂದ ಎರಡನೇ ದಿನವೂ ಶೋಧ ಕಾರ್ಯಕ್ಕೆ ಅಡಚಣೆ ಎದುರಾಗಿದೆ. ಲೈಫ್‌ಗಾರ್ಡ್ ಹಾಗೂ ಅಗ್ನಿಶಾಮಕ ದಳದ ತಂಡಗಳು ನಿರಂತರವಾಗಿ ಪ್ರಯತ್ನಿಸಿದರೂ ಇದುವರೆಗೆ ರಾಹುಲ್ ಪತ್ತೆಯಾಗಿಲ್ಲ.
ಮಂಗಳವಾರ ಮೂರನೇ ದಿನದ ಶೋಧ ಕಾರ್ಯಕ್ಕೆ ರಾಜ್ಯದ SDRF ತಂಡ ಸ್ಥಳಕ್ಕಾಗಮಿಸಲಿದ್ದು, ಸ್ಥಳೀಯರೊಂದಿಗೆ ಸೇರಿ ಶೋಧ ಕಾರ್ಯ ಮುಂದುವರೆಯಲಿದೆ ಎಂದು ಶಿರಸಿ ಉಪ ವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್ ತಿಳಿಸಿದ್ದಾರೆ.
Kshetra Samachara
08/09/2025 09:08 pm