ಕಾರವಾರ : ಭಾನುವಾರ ವಾರದ ಸಂತೆ ನಡೆಯುವ ರಸ್ತೆಗಳಲ್ಲಿಯೇ ನಾಲ್ಕು ಚಕ್ರದ ವಾಹನಗಳ ಓಡಾಟದಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಂದ ಆಗ್ರಹ ಕೇಳಲಾಗಿದೆ.
ಸಂತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಈ ಹಿಂದೆ ಕೂಡ ಸಂಬಂಧಿತ ಇಲಾಖೆಗಳಿಗೆ ಮಾಹಿತಿ ನೀಡಲಾಗಿತ್ತು. ಆದರೆ ನಗರಸಭೆ ಮತ್ತು ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸಂಚಾರ ಠಾಣೆಯವರು ಸಂತೆ ನಡೆಯುವ ರಸ್ತೆಗಳಲ್ಲಿ ಕಾರು ಮತ್ತು ಇತರೆ ನಾಲ್ಕು ಚಕ್ರದ ವಾಹನಗಳಿಗೆ ವಾರದಂತೆ ಬ್ಯಾರಿಕೇಡ್ ಹಾಕಿದ್ದರು. ಆದರೆ ಈ ನಿಯಮ ಕೆಲವೇ ವಾರಗಳಿಗೆ ಮಾತ್ರ ಅನ್ವಯವಾಗಿದ್ದು, ಇದೀಗ ಮತ್ತೆ ಅದೇ ಸಮಸ್ಯೆ ಎದುರಾಗಿದೆ.
ಇಲ್ಲಿನ ಎಂ.ಜಿ. ರಸ್ತೆ, ಪಿಕಳೆ ರಸ್ತೆ, ಗ್ರೀನ್ ಸ್ಟ್ರೀಟ್ ಗಳಲ್ಲಿ ಹೆಚ್ಚಿನ ಮಾರುಕಟ್ಟೆ ವಹಿವಾಟು ನಡೆಯುತ್ತಿದ್ದು, ಕಾರುಗಳನ್ನು ರಸ್ತೆ ಮೇಲೆ ತರುವುದಷ್ಟೇ ಅಲ್ಲದೆ, ಸಂತೆಯ ಮಧ್ಯೆ ನಿಲ್ಲಿಸಿ ತಾಸುಗಟ್ಟಲೆ ಸಂತೆ ನಡೆಸಲಾಗುತ್ತಿದೆ. ಇದರಿಂದ ಇತರ ಗ್ರಾಹಕರು ಮತ್ತು ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ.
PublicNext
07/09/2025 07:57 pm