", "articleSection": "Law and Order,Government,Public Feed,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1757144231-07~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shashikumar Hassan" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾಸನ: ನಗರ ಪಾಲಿಕೆ ಮೇಯರ್ ಹೇಮಲತಾ ಕಮಲ್ ಕುಮಾರ್, ಇಂಜಿನಿಯರ್ ಕವಿತಾ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಇಂದು ಫುಡ್ ಕೋರ್ಟ್‌ಗೆ ದಿಢೀರ್ ಭೇಟಿ ನೀ...Read more" } ", "keywords": "Hassan,Mayor Hemalatha,food court,sudden visit,surprise inspection,local news,Karnataka,civic issues,city administration,public health", "url": "https://dashboard.publicnext.com/node" }
ಹಾಸನ: ನಗರ ಪಾಲಿಕೆ ಮೇಯರ್ ಹೇಮಲತಾ ಕಮಲ್ ಕುಮಾರ್, ಇಂಜಿನಿಯರ್ ಕವಿತಾ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಇಂದು ಫುಡ್ ಕೋರ್ಟ್‌ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೇಯರ್ ಹಾಗೂ ಅಧಿಕಾರಿಗಳ ತಂಡ, ನಗರದ ಎಂ.ಜಿ ರಸ್ತೆಯಲ್ಲಿರುವ ಫುಡ್ ಕೋರ್ಟ್‌ಗೆ ದೌಡಾಯಿಸಿ, ತಯಾರು ಮಾಡಿದ್ದ ವಿವಿಧ ಆಹಾರ ಪದಾರ್ಥಗಳು ಹಾಗೂ ಮಳಿಗೆಗಳ ವ್ಯಾಪ್ತಿಯಲ್ಲಿ ಶುಚಿತ್ವ ಪರಿಶೀಲಿಸಿತು. ಈ ವೇಳೆ ಕೆಲವರು ಶುಚಿತ್ವ ಕಾಪಾಡದೇ ಇರುವುದು ಕಂಡು ಬಂತು. ಕೆಲವರು ವಾಟರ್ ಕ್ಯಾನ್‌ಗಳನ್ನು ಕ್ಲೀನ್ ಮಾಡಿರಲಿಲ್ಲ. ಅಲ್ಲದೆ ಅವಧಿ ಮುಗಿದಿರುವ ಆಹಾರ ತಯಾರಿಕಾ ಪದಾರ್ಥಗಳೂ ಕಣ್ಣಿಗೆ ಬಿದ್ದವು. ಕೂಡಲೇ ಅವರನ್ನು ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಪರಿಸ್ಥಿತಿ ಕಂಡು ಗರಂ ಆದ ಮೇಯರ್, ಉತ್ತಮ ವಾತಾವರಣ ಕಾಪಾಡದ ಅಂಗಡಿ ಮಾಲೀಕರು ಹಾಗೂ ಸಿಬ್ಬಂದಿಗೆ ಬುದ್ಧಿವಾದ ಹೇಳಿದರು. ಇದೇ ವೇಳೆ ವಿವಿಧ ಆಹಾರ ತಯಾರಿಕೆಗೆ ಬಳಕೆ ಮಾಡುವ ಎಣ್ಣೆಯನ್ನು ಮರು ಬಳಕೆ ಮಾಡದಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಈಗಾಗಲೇ ಬಳಸಿ, ಮರು ಬಳಕೆ ಮಾಡಲು ಇಟ್ಟು ಕೊಂಡಿದ್ದ ಎಣ್ಣೆಯನ್ನು ನಗರ ಪಾಲಿಗೆ ಸಿಬ್ಬಂದಿ ಹೊರ ಚೆಲ್ಲಿದರು. ಏತನ್ಮಧ್ಯೆ ಕನ್ನಡ ಬಾರದ ಹೊರ ರಾಜ್ಯದವರೂ ಫುಡ್ ಕೋರ್ಟ್ ನಲ್ಲಿ ವಿವಿಧ ತಿಂಡಿ, ತಿನಿಸು ಮತ್ತು ಬಸ್ ಕ್ರೀಂ ಮಾರಾಟ ಮಾಡುತ್ತಿದ್ದು, ಇಂಥವರು ಕೂಡಲೇ ಕನ್ನಡ ಕಲಿಯಿರಿ ಎಂದು ಸಲಹೆ ನೀಡಿದರು. ಆರೋಗ್ಯ ನಿರೀಕ್ಷಕರಾದ ಪ್ರಸಾದ್, ಆದರ್ಶ ಹಾಗೂ ಅಧಿಕಾರಿಗಳು ಹಾಜರಿದ್ದರು.
Kshetra Samachara
06/09/2025 01:07 pm