", "articleSection": "Human Stories,Education,News", "image": { "@type": "ImageObject", "url": "https://prod.cdn.publicnext.com/s3fs-public/421698-1757164315-019~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shivaram Bramhavar" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬ್ರಹ್ಮಾವರ: ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಬ್ರಹ್ಮಾವರ ವಲಯ ಮತ್ತು ಗೀತಾನಂದ ಫೌಂಡೇಶನ್ ಮಣೂರು ಕೋಟ ಇ...Read more" } ", "keywords": "Brahmavar,education,teachers,first among all professions,importance of teachers,local news,Karnataka,teacher's role,professionals", "url": "https://dashboard.publicnext.com/node" }
ಬ್ರಹ್ಮಾವರ: ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಬ್ರಹ್ಮಾವರ ವಲಯ ಮತ್ತು ಗೀತಾನಂದ ಫೌಂಡೇಶನ್ ಮಣೂರು ಕೋಟ ಇವರ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶುಕ್ರವಾರ ಶ್ಯಾಮಿಲಿ ಶನಾಯಿ ಸಭಾ ಭವನದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ್ ಸರ್ಜಿ ಉದ್ಘಾಟಿಸಿದರು.
ಅವರು ಬಳಿಕ ಮಾತನಾಡಿ ವೈದ್ಯರಿಲ್ಲದಿದ್ರೆ ಆರೋಗ್ಯ ಹಾಳು. ಪೊಲೀಸ್ ಇಲ್ಲದಿದ್ದರೆ ರಕ್ಷಣೆ ಇಲ್ಲ. ಇಂಜಿನಿಯರ್ ಇಲ್ಲದಿದ್ದರೆ ಟೆಕ್ನಾಲಜಿ ಇಲ್ಲ. ವಕೀಲರು ಇಲ್ಲದಿದ್ದರೆ ನ್ಯಾಯ ಇಲ್ಲ, ಶಿಕ್ಷಕರಿಲ್ಲದಿದ್ರೆ ಇರಲ್ಲಿ ಯಾರೂ ಇಲ್ಲ ಎಂದರು.
ಇದೇ ಸಂದರ್ಭದಲ್ಲಿ ಗೀತಾನಂದ ಪೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್ ಇವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕರನ್ನು ಮತ್ತು ಸಾಧಕ ಶಿಕ್ಷಕರನ್ನು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕುಮಾರಿ ರಮ್ಯ ಇವಳಿಂದ ಯೋಗಾಸನ ಪ್ರದರ್ಶನ ಜರುಗಿತು. ಉಡುಪಿ ಶಾಸಕ ಯಶ್‌ಪಾಲ್ ಏ ಸುವರ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಶಭನಾ ಅಂಜುಮ್ ಬ್ರಹ್ಮಾವರ ತಾಲೂಕು ಪಂಚಾಯತಿ ಕಾರ್ಯನಿರ್ವಣಾಧಿಕಾರಿ ಎಚ್.ವಿ ಇಬ್ರಾಹಿಂಪುರ, ಮಾಜಿ ಶಾಸಕ ಕೆ ರಘುಪತಿ ಭಟ್, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ,ರಾಜಾ ರಾಮಶೆಟ್ಟಿ, ಬಿರ್ತಿ ರಾಜೇಶ್ ಶೆಟ್ಟಿ, ಶಿಕ್ಷಣ ಇಲಾಖೆಯ ಅಶೋಕ್ ಕಾಮತ್, ಲೋಕೇಶ್ ಸಿ, ಪ್ರಕಾಶ್ ಬಿ.ಬಿ.ಅಂಪಾರು ದಿನಕರ ಶೆಟ್ಟಿ ಮತ್ತು ಶಿಕ್ಷಕರ ಸಂಘದ ಪಧಾಧಿಕಾರಿಗಳು ಇನ್ನಿತರು ಉಪಸ್ಥಿತರಿದ್ದರು.
Kshetra Samachara
06/09/2025 06:52 pm