", "articleSection": "Crime,Law and Order,Religion", "image": { "@type": "ImageObject", "url": "https://prod.cdn.publicnext.com/s3fs-public/474798-1757322039-dml.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "Vinay.Hegde" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ಬೆಳ್ತಂಗಡಿಯ ಧರ್ಮಸ್ಥಳದ ನೇತ್ರಾವತಿಯ ಬಂಗ್ಲಗುಡ್ಡ ಕಾಡು ಮತ್ತೆ ಕುತೂಹಲ ಸೃಷ್ಟಿಸಿದೆ. ತಾನು ನೂರಾರು ಮೃತದೇಹಗಳನ್ನು ಹೂತಿಟ್ಟಿದ...Read more" } ", "keywords": "Netravati forest mystery, Banglagudda forest news, Netravati digging operation, mysterious forest Karnataka, treasure hunt Netravati, Banglagudda Karnataka news, Netravati jungle digging, forest curiosity Karnataka, hidden treasure Karnataka, Banglagudda excavation, Netravati suspense news, Karnataka forest mystery, Banglagudda exploration, Netravati breaking news, Karnataka viral news", "url": "https://dashboard.publicnext.com/node" }
ಮಂಗಳೂರು: ಬೆಳ್ತಂಗಡಿಯ ಧರ್ಮಸ್ಥಳದ ನೇತ್ರಾವತಿಯ ಬಂಗ್ಲಗುಡ್ಡ ಕಾಡು ಮತ್ತೆ ಕುತೂಹಲ ಸೃಷ್ಟಿಸಿದೆ.
ತಾನು ನೂರಾರು ಮೃತದೇಹಗಳನ್ನು ಹೂತಿಟ್ಟಿದ್ದೇನೆ ಎಂದು ಹೇಳಿಕೆ ನೀಡಿ ಎಸ್ಐಟಿ ಮುಂದೆ ಬಂದಿದ್ದ ಚಿನ್ನಯ್ಯ ತಪ್ಪು ಸ್ಪಾಟ್ ತೋರಿಸಿದ್ದಾನೆ. ರಿಯಲ್ ಸ್ಪಾಟ್ ನಾನು ತೋರಿಸುತ್ತೇನೆ ಎಂದು ಎಸ್ಐಟಿ ಅಧಿಕಾರಿಗಳನ್ನು ಸೌಜನ್ಯ ಮಾವ ವಿಠಲಗೌಡ ಬಂಗ್ಲಗುಡ್ಡ ಕಾಡಿಗೆ ಕರೆದುಕೊಂಡು ಹೋಗಿದ್ದರು.
ಈ ವೇಳೆ ಬಂಗ್ಲಗುಡ್ಡ ಕಾಡಿನಲ್ಲಿ ಮಾನವ ಮೂಳೆಗಳನ್ನು ನೋಡಿ ಎಸ್ಐಟಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಈ ಮೂಲಕ ವಿಠಲಗೌಡ ಹೇಳಿಕೆ ಇಡೀ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ದೊರಕಿದೆ. ಆದ್ದರಿಂದ ಬಂಗ್ಲಗುಡ್ಡ ಕಾಡಿಗೆ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಮತ್ತೆ ಶೋಧ?: ಈ ಮಹಜರು ವೇಳೆ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರಾಗಲಿ, ಬೆಳ್ತಂಗಡಿಯ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರಾಗಲೀ ಇರಲಿಲ್ಲ. ಅಲ್ಲದೆ ಮಹಜರು ವೇಳೆ ನೆಲವನ್ನೂ ಆಗೆದಿರಲಿಲ್ಲ. ಹಾಗಾಗಿ ಅಲ್ಲಿ ಎಸ್‌ಐಟಿ ಮತ್ತೆ ಶೋಧಕಾರ್ಯ ಮುಂದುವರಿಸುವ ಸಾಧ್ಯತೆ ಇದೆ. ಆದ್ದರಿಂದ ನಾಳೆ ಈ ಮಹಜರು ಕಾರ್ಯ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
PublicNext
08/09/2025 02:30 pm