", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/286525-1757167794-WhatsApp-Image-2025-09-06-at-7.39.47-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶ್ರೀ ಗಣೇಶನ ವಿಸರ್ಜನೆಗೆ ಅದ್ಧೂರಿಯಾಗಿ ತಯಾರಿ ಮಾಡಲಾಗಿದ್ದು, ಪೊಲೀಸರು ಸಕಲ ವ್ಯವಸ್ಥೆ ಮಾಡಿಕೊಂಡಿದ್ದಾ...Read more" } ", "keywords": "Belagavi liquor smuggling, Goa liquor seized, high-end car used for smuggling, 50 boxes of liquor confiscated, Belagavi excise department crackdown, luxury car impounded, liquor smuggling case, Belagavi news updates. ", "url": "https://dashboard.publicnext.com/node" }
ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶ್ರೀ ಗಣೇಶನ ವಿಸರ್ಜನೆಗೆ ಅದ್ಧೂರಿಯಾಗಿ ತಯಾರಿ ಮಾಡಲಾಗಿದ್ದು, ಪೊಲೀಸರು ಸಕಲ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಂದು ಅಹಿತಕರ ಘಟನೆ ನಡೆಯದಂತೆ ತಡೆಯಲು ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಆದರೆ ಅಕ್ರಮವಾಗಿ ಗೋವಾ ರಾಜ್ಯದ ಮದ್ಯ ಸಾಗಿಸಲು ಯತ್ನಿಸಿ ಗ್ಯಾಂಗ್ ವಿಫಲವಾಗಿದೆ.
ಬೆಳಗಾವಿಗೆ ಗಡಿಗೆ ಹೊಂದಿಕೊಂಡಿರುವ ಗೋವಾ ರಾಜ್ಯದಿಂದ ಪದೇ ಪದೆ ಅಕ್ರಮ ಮದ್ಯ ಸಾಗಾಟ ನಡೆಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇಂದು ಕೂಡ ಅಬಕಾರಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಮದ್ಯ ಸೀಜ್ ಮಾಡಿದ್ದಾರೆ.
ಬೆಳಗಾವಿ ಗಡಿಯಲ್ಲಿರುವ ರಾಕಸಕೊಪ್ಪ ಡ್ಯಾಂ ಬಳಿ ಕಾರ್ ನಲ್ಲಿ ಮದ್ಯ ಸಾಗಿಸುತ್ತಿರುವುದನ್ನು ನೋಡಿ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಬಾಳು ಸಾತೆರಿ ಎಂಬ ಆರೋಪಿ ಕಾರ್ ಬಿಟ್ಟು ಪರಾರಿಯಾಗಿದ್ದಾನೆ.
ಕಾರ್ ನಲ್ಲಿ ಒಟ್ಟು 10 ಬ್ರ್ಯಾಂಡ್ ಗಳ 50 ಬಾಕ್ಸ್ ಗಳು ಇದ್ದು, ಕರ್ನಾಟಕದ ಮದ್ಯದ ಬೆಲೆಯ ಪ್ರಕಾರ 5 ಲಕ್ಷ 63 ಸಾವಿರ ಆಗುತ್ತೆ. 3 ಲಕ್ಷ ಮೌಲ್ಯದ ಕಾರ್ ಹಾಗೂ 30 ಸಾವಿರ ಮೌಲ್ಯದ ಬೈಕ್ ಸೀಜ್ ಮಾಡಲಾಗಿದೆ. ಹೀಗೆ ಒಟ್ಟು 8 ಲಕ್ಷ 86 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
PublicNext
06/09/2025 07:41 pm