", "articleSection": "Crime,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1757335166-14~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ: ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರೂ ಇದ್ದೇ ಇರುತ್ತಾರೆ ಎನ್ನುವುದಕ್ಕೆ ಈ ಸ್ಟೋರಿಯೇ ಸಾಕ್ಷಿ. ಹಣ ಡಬಲ್ ಆಗುವ ಆಸೆಗೆ ಬಿದ್ದವರು...Read more" } ", "keywords": "Belagavi,cryptocurrency scam,Trump Currency,crores of rupees fraud,financial fraud,investment scam,crypto fraud,local news,Karnataka,Trump coin scam", "url": "https://dashboard.publicnext.com/node" }
ಬೆಳಗಾವಿ: ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರೂ ಇದ್ದೇ ಇರುತ್ತಾರೆ ಎನ್ನುವುದಕ್ಕೆ ಈ ಸ್ಟೋರಿಯೇ ಸಾಕ್ಷಿ. ಹಣ ಡಬಲ್ ಆಗುವ ಆಸೆಗೆ ಬಿದ್ದವರು ಹೂಡಿಕೆ ಮಾಡಿದ ಹಣ ವಾಪಸ್ ಸಿಕ್ರೆ ಸಾಕು ಎಂದು ನ್ಯಾಯಕ್ಕಾಗಿ ಪರದಾಡುತಿದ್ದಾರೆ.
ಹೌದು.. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮನವಳ್ಳಿ ಬಳಿಯ ಶಿಂಧೋಗಿ ಗ್ರಾಮದಲ್ಲಿ ಸ್ಕ್ರಿಪ್ಟೊ ಕರೆನ್ಸಿ ಎಂಬ ಸ್ಕೀಮ್ ಬಂದಿದೆ. ಹಣ ಡಬಲ್ ಆಗುತ್ತೆ ಎಂದು ಪರಿಚಯಸ್ಥರಿಂದಲೇ ಕೋಟ್ಯಾಂತರ ಹಣ ವಂಚಿಸಲಾಗಿದೆ ಎಂದು ಬೆಳಗಾವಿಯ ಸಿಎನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಸ್ಕ್ರಿಪ್ಟೊ ಕರೆನ್ಸಿ ಎಂಬ ಸ್ಕೀಮ್ ಇದೆ. ಇದಕ್ಕೆ ಹಣ ಹೂಡಿಕೆ ಮಾಡಿದರೆ ಒಳ್ಳೆಯ ಆದಾಯ ಬರುತ್ತೆ. ನಾವು ಈಗಾಗಲೇ ದುಡ್ಡು ಹಾಕಿ ಒಳ್ಳೆಯ ಆದಾಯ ಗಳಿಸಿದ್ದೇವೆ, ಮನೆ ಕಟ್ಟಿಸಿದ್ದೇವೆ. ಕಾರ್ ತಗೊಂಡಿದ್ದೇವೆ ಎಂದು ಆಸೆ ಹುಟ್ಟಿಸಿದರು. ಹೀಗೆ ನೂರಾರು ಜನರಿಂದ ಲಕ್ಷ ಲಕ್ಷ ಹಣ ಹೂಡಿಕೆ ಮಾಡಿಸಿ ಶಿವಾನಂದ ಕಲ್ಲೋಳ್ಳಿ, ಸುರೇಶ ಕಟಗನ್ನವರ್, ಮಹಾದೇವ ಕಟಗನ್ನವರ್ ,ವಿನಯ ಕರದಗಿ ಹಾಗೂ ಮೋಹನ್ ಸರವಿ ಎನ್ನುವವರು ಕೋಟ್ಯಾಂತರ ರೂಪಾಯಿ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕೆಲವರ ಕಡೆ ಒಂದು ಐಡಿಗೆ 1 ಲಕ್ಷ 11 ಸಾವಿರ ತಗೊಂಡಿದ್ದಾರೆ. ಹಣ ಹೂಡಿಕೆ ಮಾಡಿದ ಮೇಲೆ ಪ್ರತಿ ತಿಂಗಳು 11 ಸಾವಿರ ಬರುತ್ತೆ ಎಂದು ನಂಬಿಸಿದ್ದಾರೆ. ಆರಂಭದಲ್ಲಿ ಹಣ ನೀಡಿ ಆಮೇಲೆ ಹಣ ಕೇಳಲು ಹೋದ್ರೆ ಯಾರಿಗೆ ಕೊಟ್ಟಿದ್ದೀರಿ ಎಂದು ನೂರಾರು ಜನರನ್ನು ಕರೆದು ನಮಗೆ ಹೊಡೆಯಲು ಬರುತ್ತಿದ್ದಾರೆ. ಅವರ ವಿರುದ್ಧ ದೂರು ನೀಡಿದವರಿಗೆ ಧಮ್ಕಿ ಹಾಕುತ್ತಿದ್ದಾರೆ. ಅವರಿಗೆ ಕೊಟ್ಟ ಹಣ ತುಂಬಲು ಬೇರೆ ಕಡೆಯಿಂದ ಸಾಲ ತೆಗೆದು ತುಂಬಲಾಗುತ್ತಿದೆ ಎಂದು ವಂಚನೆಗೆ ಒಳಗಾದವರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಸವದತ್ತಿ ತಾಲೂಕಿನಲ್ಲೇ ಮೂರ್ನಾಲ್ಕು ಕೋಟಿ ಹಣ ವಂಚಿಸಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಆದರೆ, ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಹಣ ಡಬಲ್ ಮಾಡಿಕೊಳ್ಳುವ ದುರಾಸೆಗೆ ಬೀಳುತ್ತಿರುವುದು ವಿಪರ್ಯಾಸವೇ ಸರಿ.
PublicNext
08/09/2025 06:09 pm