ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಇಂದು ರಕ್ತ ಚಂದ್ರ ಗ್ರಹಣ - ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯ ಬಂದ್

ಹಾಸನ: ಇಂದು ರಕ್ತ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಐತಿಹಾಸಿಕ ಬೇಲೂರಿನ ಶ್ರೀ‌ ಚನ್ನಕೇಶವ ಸ್ವಾಮಿ ದೇವಾಲಯ ಇಂದು ಮಧ್ಯಾಹ್ನ 3 ಬಂದ್ ಆಗಲಿದೆ ಎಂದು ದೇವಾಲಯ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ತಿಳಿಸಿದ್ದಾರೆ.

ಬೇಲೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ನಭೋ ಮಂಡಲದಲ್ಲಿ ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ನಡೆಯಲಿದೆ. ಆದ್ದರಿಂದ ದೇವಾಲಯವನ್ನು ಇಂದು ಮಧ್ಯಾಹ್ನ ಮೂರು ಗಂಟೆಗೆ ಮುಚ್ಚಲಾಗುವುದು. ಮರುದಿನ ಅಂದರೆ ಸೋಮವಾರ ಬೆಳಗ್ಗೆ ಎಂದಿನಂತೆ ದೇವಾಲಯದ ಶುದ್ಧಿ ಮಾಡಿದ ನಂತರ ದೇಗುಲದ ಬಾಗಿಲು ತೆರೆಯಲಾಗುತ್ತೆ ಎಂದು ತಿಳಿಸಿದ್ದಾರೆ.

Edited By :
PublicNext

PublicNext

07/09/2025 01:34 pm

Cinque Terre

17.27 K

Cinque Terre

0

ಸಂಬಂಧಿತ ಸುದ್ದಿ