ಕೋಲಾರ : ಇಂದು ನಭೋ ಮಂಡಲದಲ್ಲಿ ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ನಡೆಯಲಿದೆ. ಈ ಗ್ರಹಣದ ಎಫೆಕ್ಟ್ ದೇವರಿಗೂ ತಟ್ಟಲಿದ್ದು, ಜಿಲ್ಲೆಯ ಬಹುತೇಕ ದೇವಾಲಯಗಳು ಬಂದ್ ಆಗಲಿವೆ.
ಇಂದು ಭಾರತದಲ್ಲಿ ಚಂದ್ರಗ್ರಹಣ ಸಂಭವಿಸಲಿದ್ದು, ಜನರಲ್ಲಿ ಸಾಕಷ್ಟು ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಬಹುತೇಕ ದೇವಾಲಯಗಳು ಮಧ್ಯಾಹ್ನವೇ ಕ್ಲೋಸ್ ಆಗಲಿವೆ. ನಗರದ ಪ್ರಸಿದ್ಧ ದೇಗುಲವಾದ ಕೋಲಾರಮ್ಮ ದೇವಾಲಯ ಸೋಮೇಶ್ವರ ದೇವಾಲಯ ಇಂದು ಬಂದ್ ಆಗಲಿದ್ದು, ಗ್ರಹಣಕ್ಕೂ ಮೊದಲೇ ಸುಮಾರು 6 ಗಂಟೆ ದೇವಾಲಯ ಬಂದ್ ಆಗಲಿದೆ. ಗ್ರಹಣದ ಮರುದಿನ ಸೋಮವಾರ ಬೆಳಗ್ಗೆ 6 ಗಂಟೆಗೆ ಶುದ್ಧೀಕರಣ, ಪುಣ್ಯ ಮಾಡಿ ದರ್ಶನ ವ್ಯವಸ್ಥೆ ಮಾಡಲಾಗಿದೆ.
PublicNext
07/09/2025 03:04 pm