#ಮಾಗಡಿ
ಮಾಗಡಿ: ಮಾಗಡಿ ತಾಲೂಕಿನಿಂದ ಸೋಲೂರು ಹೋಬಳಿಯನ್ನ ಕೈ ಬಿಟ್ಟು ನೆಲಮಂಗಲ ತಾಲೂಕಿಗೆ ಸೇರಿಸಲು ಸಚಿವ ಸಂಪುಟದಲ್ಲಿ ತೀರ್ಮಾನವಾಗಿದೆ. ಈ ಬೆನ್ನಲ್ಲೆ ತಾಲೂಕಿನಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸೋಲೂರು ಮತ್ತು ಮಾಗಡಿಗೆ ಭಾವನಾತ್ಮಕ ಸಂಬಂಧವಿದ್ದು, ಸೋಲೂರನ್ನ ಮಾಗಡಿಯಿಂದ ಕೈ ಬಿಟ್ರೆ ಇಲ್ಲಿನ ಜನಕ್ಕೆ ಅನುಕೂಲಕ್ಕಿಂತ ಅನಾನುಕೂಲ ಹೆಚ್ಚಾಗಲಿದೆ. ಸೋಲೂರು ನೆಲಮಂಗಲಕ್ಕೆ ಸೇರಿದರೆ ಡಿಸಿ ಕಚೇರಿಗೆ ದೇವನಹಳ್ಳಿಗೆ ಹೋಗಬೇಕಾಗುತ್ತೆ. ಅಷ್ಟೇ ಅಲ್ಲದೆ ಕಂದಾಯ ದಾಖಲೆಗಳು ಮಿಸ್ ಆಗೋ ಸಾಧ್ಯತೆಯಿದೆ. ಆಡಳಿತಾತ್ಮಕವಾಗಿ ಮಾಗಡಿಯಲ್ಲಿ ಸೋಲೂರು ಉಳಿದ್ರೆ ಇಲ್ಲಿನ ಜನರಿಗೆ ಅನುಕೂಲವಾಗಿಲಿದೆ ಎಂದು ಮಾಗಡಿ ವಕೀಲರ ಸಂಘ ಇಂದು ಮಾಗಡಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.
PublicNext
08/09/2025 01:52 pm