ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಚಗಂಗಾವಳಿ ನದಿ ಸಮೀಪ ಇಸ್ಪೀಟ್ ಜುಗಾರಿ ಆಟ - ಪೊಲೀಸರ ದಾಳಿ , ನಾಲ್ವರ ಬಂಧನ

ಕುಂದಾಪುರ: ಕುಂದಾಪುರದ ಪಂಚಗಂಗಾವಳಿ ಹೊಳೆಯ ಬದಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದ 4 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸ್‌ ಉಪನಿರೀಕ್ಷಕ ನಂಜಾನಾಯ್ಕ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಅಣ್ಣಯ್ಯ ಖಾರ್ವಿ(62) ಸುರೇಶ ನಾಯ್ಕ(71)ದಯಾನಂದ(55) ಮತ್ತು ಉಬೇದುಲ್ಲಾ(50) ಬಂಧಿತರು.

ಬಂಧಿತರಿಂದ ಅಂದರ್‌ ಬಾಹರ್‌ ಜುಗಾರಿ ಆಟಕ್ಕೆ ಉಪಯೋಗಿಸಿದ 3150 ರೂ. ನಗದು , 4 ಮೊಬೈಲ್‌ ಪೋನ್‌ಗಳು ಮತ್ತು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಅಪರಾದ ಕ್ರಮಾಂಕ 111/2025 ಕಲಂ 87 KP ACTರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Edited By :
Kshetra Samachara

Kshetra Samachara

08/09/2025 02:36 pm

Cinque Terre

5.97 K

Cinque Terre

0

ಸಂಬಂಧಿತ ಸುದ್ದಿ