ಬಿಹಾರ : ಜಗತ್ತಲ್ಲಿ ಅನೇಕ ವಿಸ್ಮಯಗಳು ನಮ್ಮ ಸುತ್ತಮುತ್ತ ನಡೆಯುತ್ತಲೆ ಇದೆ. ಇದಕ್ಕೆ ಉದಾಹರಣೆ ಎಂಬಂತೆ ಬಿಹಾರದಲ್ಲಿ ಶಾಕಿಂಗ್ ಘಟನೆಯೊಂದು ವರದಿಯಾಗಿದೆ.
ಬಿಹಾರದಲ್ಲಿ ವ್ಯಕ್ತಿಯೊಬ್ಬನ ಕಣ್ಣಿನ ಒಳಗಡೆ ಹಲ್ಲು ಬೆಳೆದು ಇದೀಗ ಎಲ್ಲೆಡೆ ಅಚ್ಚರಿಗೆ ಕಾರಣವಾಗಿದೆ. ಡಾಕ್ಟರ್ ಗಳು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಕಣ್ಣಿನ ಒಳಗಡೆ ಇದ್ದ ಹಾಲನ್ನು ತೆಗೆದಿದ್ದಾರೆ. ಅಪರೂಪದಲ್ಲಿ ಅಪರೂಪ ಪ್ರಕರಣ ಇದಾಗಿದೆ ಎಂದು ವೈದ್ಯರು ಬಣ್ಣಿಸಿದ್ದಾರೆ.
ಸಿವಾನ್ ಜಿಲ್ಲೆಯ 42 ವರ್ಷದ ವ್ಯಕ್ತಿಗೆ ಮೇಲಿನ ಭಾಗದ ಹಲ್ಲು ನೋವು ಕಾಣಿಸಿಕೊಂಡಿದೆ. ರಕ್ತ ಸ್ರಾವ ಕೂಡ ಆಗಿದೆ. ವೈದ್ಯರ ಬಳಿ ಹೋದ ವ್ಯಕ್ತಿಗೆ ಸ್ಕ್ಯಾನ್ ಮಾಡಲಾಗಿದೆ. I ವೇಳೆ ಕಣ್ಣಿನ ಒಳಗಡೆ ಹಲ್ಲು ಇರೋದು ಪತ್ತೆಯಾಗಿದ್ದು, ವೈದ್ಯರು ಆಪರೇಷನ್ ಮಾಡಿ ಇದೀಗ ಹಲ್ಲು ತೆಗೆದಿದ್ದಾರೆ.
ಸೈನಸ್ ಭಾಗದಲ್ಲಿ ಕಡೆ ಹಲ್ಲು ಬೆಳೆಯುತಿತ್ತು. ಹಲ್ಲಿನ ಮೇಲಿನ ಭಾಗದಿಂದ ಹಲ್ಲಿನ ಬುಡ ಕಣ್ಣಿನ ಕಡೆ ಬೆಳೆದಿತ್ತು. ಹಲ್ಲು ಕಣ್ಣಿನ ಒಳಗಡೆ ಬೆಳೆದ ಕಾರಣ ವಿಷನ್ ಕೂಡ ಬ್ಲರ್ ಆಗಿತ್ತು. ಪ್ರಕಾರಣವನ್ನು ಗಂಭೀರವಾಗಿ ಪರಿಗಣಿಸಿದ ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ವೈದ್ಯರು ಮುಖವನ್ನು ಸ್ಕ್ಯಾನ್ ಮಾಡಿ ಸಮಸ್ಯೆ ಕಂಡುಹಿಡಿದು ಯಶಸ್ವಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ.
PublicNext
08/09/2025 02:46 pm