", "articleSection": "Crime,Law and Order,Human Stories,International", "image": { "@type": "ImageObject", "url": "https://prod.cdn.publicnext.com/s3fs-public/387839-1757331609-Untitled-design---2025-09-08T171336.165.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಾಷಿಂಗ್ಟನ್: ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಹರಿಯಾಣದ ಜಿಂದ್ ಜಿಲ್ಲೆಯ 26 ವರ್ಷದ ಕಪಿಲ್ ಎ...Read more" } ", "keywords": "Indian killed in Los Angeles, Indian security guard shot, Kapil Jindh Haryana, public urination dispute, Indian murdered in America, Los Angeles shooting, Indian youth killed USA, Kapil murder case, Washington news, Indian immigrant crime USA", "url": "https://dashboard.publicnext.com/node" }
ವಾಷಿಂಗ್ಟನ್: ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಹರಿಯಾಣದ ಜಿಂದ್ ಜಿಲ್ಲೆಯ 26 ವರ್ಷದ ಕಪಿಲ್ ಎಂಬ ವ್ಯಕ್ತಿಯನ್ನು ಲಾಸ್ ಏಂಜಲೀಸ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.
ಜಿಂದ್‌ನ ಬ್ರಾಹ್ ಕಲಾನ್ ನಿವಾಸಿ ಕಪಿಲ್ ಮೃತ ವ್ಯಕ್ತಿಯಾಗಿದ್ದು, ಇವರು ಅಮೆರಿಕದ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
ಜಿಂದ್‌ನ ಪಿಲ್ಲು ಖೇರಾದಲ್ಲಿ ಟ್ರ್ಯಾಕ್ಟರ್ ಏಜೆನ್ಸಿ ನಡೆಸುತ್ತಿರುವ ಮೃತ ಕಪಿಲ್ ಅವರ ಚಿಕ್ಕಪ್ಪ ರಮೇಶ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ಶನಿವಾರ ಸಂಜೆ ಅವರ ಸಾವಿನ ಸುದ್ದಿ ನಮಗೆ ತಲುಪಿತು ಎಂದು ತಿಳಿಸಿದ್ದಾರೆ.
ಕಪಿಲ್ ಸಾವಿನ ಬಗ್ಗೆ ನಮಗೆ ಅಮೆರಿಕದ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಸಿಕ್ಕಿದೆ. ಕಪಿಲ್ ತನ್ನ ಅಂಗಡಿಯ ಬಳಿಯ ರಸ್ತೆಯಲ್ಲಿ ಮೂತ್ರ ವಿಸರ್ಜಿಸದಂತೆ ಅಮೆರಿಕದ ಪ್ರಜೆಯೊಬ್ಬರನ್ನು ಕೇಳಿಕೊಂಡಿದ್ದಾನೆ. ನಂತರ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.
ಬಳಿಕ ಆ ಸ್ಥಳೀಯ ವ್ಯಕ್ತಿ ತನ್ನ ಪಿಸ್ತೂಲಿನಿಂದ ಕಪಿಲ್ ಮೇಲೆ ಗುಂಡು ಹಾರಿಸಿದ್ದ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯರು ಆತ ಮೃತಪಟ್ಟಿದ್ದಾನೆಂದು ತಿಳಿಸಿದ್ದಾರೆಂದು ವರದಿಯಾಗಿದೆ.
ಬುಧವಾರ ಕಪಿಲ್ ಅವರ ಮರಣೋತ್ತರ ಪರೀಕ್ಷೆ ನಡೆಯಲಿದೆ. ಅವರ ಮೃತದೇಹವನ್ನು ಭಾರತಕ್ಕೆ ತರಲು ಸುಮಾರು ರೂ.15 ಲಕ್ಷ ವೆಚ್ಚವಾಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
PublicNext
08/09/2025 05:10 pm