", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/40083620250908042529filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshShimogga" }, "editor": { "@type": "Person", "name": "9731141698" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ನಗರ ಭಾಗದಲ್ಲಿರುವ ಉದ್ಯಾನವನಗಳ ನಿರ್ವಹಣೆ ಹಾಗೂ ಸ್ವಚ್ಚತೆಗೆ ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಿ ಅಗತ್ಯ ಸಲಕರಣೆಗಳನ್ನು ಒದಗಿಸಬೇಕ...Read more" } ", "keywords": "Park Maintenance: Take action for park management in Shivamogga", "url": "https://dashboard.publicnext.com/node" } ಶಿವಮೊಗ್ಗ : ಉದ್ಯಾನವನಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಿ - ವಿಶ್ವಾಸ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಉದ್ಯಾನವನಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಿ - ವಿಶ್ವಾಸ್

ಶಿವಮೊಗ್ಗ : ನಗರ ಭಾಗದಲ್ಲಿರುವ ಉದ್ಯಾನವನಗಳ ನಿರ್ವಹಣೆ ಹಾಗೂ ಸ್ವಚ್ಚತೆಗೆ ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಿ ಅಗತ್ಯ ಸಲಕರಣೆಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್ ಪಾಲಿಕೆ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದರು.

ನಗರದಲ್ಲಿ 600 ಕ್ಕೂ ಹೆಚ್ಚು ಉದ್ಯಾವನಗಳಿದ್ದು, ಬಹುತೇಕ ಉದ್ಯಾನವನಗಳು ಜನರ ಉಪಯೋಗಕ್ಕೆ ಯೋಗ್ಯವಾಗದೆ ಹಂದಿ, ಹಾವು ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿವೆ. ಉದ್ಯಾನವನಗಳ ನಿರ್ವಹಣೆಗೆ ಬೇಕಾಗಿರುವ ಸಲಕರಣೆ ಮತ್ತು ಸಮರ್ಪಕವಾದ ಕಾರ್ಮಿಕರನ್ನು ನೀಡದಿರುವುದು ಇದಕ್ಕೆ ಮುಖ್ಯ ಕಾರಣ ಎಂದು ಮನವಿಯಲ್ಲಿ ದೂರಿದರು.

ಮಹಾನಗರ ಪಾಲಿಕೆಯಿಂದ ಕೆವಲ 10 ಜನ ಕಾರ್ಮಿಕರನ್ನು ನೀಡಿದ್ದು, ಅದರಲ್ಲಿ 9 ಜನ ಮಹಿಳೆಯರೇ ಇದ್ದಾರೆ. ಸಮರ್ಪಕವಾಗಿ ಅವರನ್ನು ಸಹ ಕೆಲಸಕ್ಕೆ ಬಳಸಿಕೊಳ್ಳದೆ ಸರಿಯಾದ ಮೇಲ್ವಿಚಾರಕರು ಇಲ್ಲದೆ ಇರುವುದು ಕೂಡ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಅವರಲ್ಲಿ ವೀಡ್‌ಕಟರ್ ಇದ್ದರೂ ಅದನ್ನು ನಿರ್ವಹಿಸಲು ಒಬ್ಬ ಕಾರ್ಮಿಕರು ಇಲ್ಲದೆ ಇರುವುದು ತುಂಬ ನೊವಿನ ಸಂಗತಿ.

ಇಂದಿನ ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಲು ದೈಹಿಕವಾಗಿ ಹಾಗೂ ಮನಸಿಕವಾಗಿ ಸದೃಡ ಮಾಡಲು ಈ ಉದ್ಯಾನವನಗಳು ತುಂಬಾ ಉಪಯೋಗವಾಗಿದ್ದು, ಪ್ರಸ್ತುತ ಮಹಿಳೆಯರು ವೃದ್ಧರು ತಮ್ಮ ಮಕ್ಕಳು ಮೊಮ್ಮಕಳನ್ನು ಉದ್ಯಾನವನಗಳಿಗೆ ಕರೆದುಕೊಂಡು ಬರಾದಂತ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

08/09/2025 04:25 pm

Cinque Terre

540

Cinque Terre

0

ಸಂಬಂಧಿತ ಸುದ್ದಿ