", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/40083620250908054228filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshShimogga" }, "editor": { "@type": "Person", "name": "9731141698" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ: ವೀರಶೈವ ಮತ್ತು ಲಿಂಗಾಯತ ಬೇರೆ ಎಂಬ ಚರ್ಚೆಯಿಂದಾಗಿ ಸಂಘಟನೆಗೆ ಹಿನ್ನಡೆಯಾಗುತ್ತಿದೆ ಎಂಬ ಕಾರಣ ನೀಡಿ, ಜಿಲ್ಲೆಯ ಎಲ್ಲಾ ಮಠಗಳ ಶಿವಾಚಾ...Read more" } ", "keywords": "Node", "url": "https://dashboard.publicnext.com/node" } ಶಿವಮೊಗ್ಗ: ಮಲೆನಾಡು ವೀರಶೈವ ಮಠಾಧೀಶರ ಪರಿಷತ್‌ನ ಸಂಘಟನೆಗೆ ಹಿನ್ನೆಡೆ - ಸದಸ್ಯತ್ವಕ್ಕೆ ರಾಜೀನಾಮೆ ನಿರ್ಧಾರ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಮಲೆನಾಡು ವೀರಶೈವ ಮಠಾಧೀಶರ ಪರಿಷತ್‌ನ ಸಂಘಟನೆಗೆ ಹಿನ್ನೆಡೆ - ಸದಸ್ಯತ್ವಕ್ಕೆ ರಾಜೀನಾಮೆ ನಿರ್ಧಾರ

ಶಿವಮೊಗ್ಗ: ವೀರಶೈವ ಮತ್ತು ಲಿಂಗಾಯತ ಬೇರೆ ಎಂಬ ಚರ್ಚೆಯಿಂದಾಗಿ ಸಂಘಟನೆಗೆ ಹಿನ್ನಡೆಯಾಗುತ್ತಿದೆ ಎಂಬ ಕಾರಣ ನೀಡಿ, ಜಿಲ್ಲೆಯ ಎಲ್ಲಾ ಮಠಗಳ ಶಿವಾಚಾರ್ಯರು ಮಲೆನಾಡು ವೀರಶೈವ ಮಠಾಧೀಶರ ಪರಿಷತ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯಿಂದ ಇಲ್ಲಿನ ಹರಕೆರೆಯ ರಂಭಾಪುರೀಶ ನಿವಾಸದಲ್ಲಿ ನಡೆದ ಸಭೆಯಲ್ಲಿ, ಸಮಿತಿಯ ಸಹಕಾರ್ಯದರ್ಶಿ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಶಿವಾಚಾರ್ಯರು ಭಾಗವಹಿಸಿದ್ದರು. ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮುಂದಿನ ಶಿವಾಚಾರ್ಯರ ದಿನಗಳಲ್ಲಿ ವೀರಶೈವ ಲಿಂಗಾಯತ ಒಂದೇ ಎಂಬ ಧೈಯವನ್ನು ಪ್ರತಿಪಾದಿಸುವ ವೀರಶೈವ ಲಿಂಗಾಯತ ಮಹಾಸಭೆಯ ತೀರ್ಮಾನದಂತೆ ಕಾರ್ಯ ನಿರ್ವಹಿಸಲು ಎಲ್ಲರೂ ನಿರ್ಧರಿಸಿದ್ದಾರೆ ಎಂದು ಸಂಸ್ಥೆಯ ಜಿಲ್ಲಾ ವಕ್ತಾರ ಕಡೆನಂದಿಹಳ್ಳಿ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : PublicNext Desk
PublicNext

PublicNext

08/09/2025 05:42 pm

Cinque Terre

5.29 K

Cinque Terre

0

ಸಂಬಂಧಿತ ಸುದ್ದಿ