", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/405356-1757348399-nanu.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ 11ನೇ ದಿನದ ಗಣೇಶ ಮೂರ್ತಿ ವಿಸರ್ಜನೆ ವೇಳೆ ಪೊಲೀಸರು ನಡೆಸಿದ ಲಘು ಲಾಠಿ ಪ್ರಹಾರವನ್ನು ಕೇಂದ್ರ...Read more" } ", "keywords": "Pralhad Joshi, central minister statement, Dharwad news, BJP leader Pralhad Joshi, fight against issues, strong stance by minister, Karnataka politics updates.", "url": "https://dashboard.publicnext.com/node" } ಧಾರವಾಡ: "ನಾನೇ ಬರ್ತೀನಿ ಗಟ್ಟಿಯಾಗಿ ನಿಂತು ಹೋರಾಟ ಮಾಡ್ತೀನಿ' -ಕೇಂದ್ರ ಸಚಿವ ಜೋಶಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: "ನಾನೇ ಬರ್ತೀನಿ ಗಟ್ಟಿಯಾಗಿ ನಿಂತು ಹೋರಾಟ ಮಾಡ್ತೀನಿ' -ಕೇಂದ್ರ ಸಚಿವ ಜೋಶಿ

ಧಾರವಾಡ: ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ 11ನೇ ದಿನದ ಗಣೇಶ ಮೂರ್ತಿ ವಿಸರ್ಜನೆ ವೇಳೆ ಪೊಲೀಸರು ನಡೆಸಿದ ಲಘು ಲಾಠಿ ಪ್ರಹಾರವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತೀವ್ರವಾಗಿ ಖಂಡಿಸಿದ್ದಾರೆ.

ದೆಹಲಿಯಿಂದ ವಿಡಿಯೋ ಸಂದೇಶ ಕಳುಹಿಸಿರುವ ಅವರು, ನನ್ನ ಲೋಕಸಭಾ ಕ್ಷೇತ್ರದ ನರೇಂದ್ರ ಗ್ರಾಮದಲ್ಲಿ ಅತ್ಯಂತ ಶಾಂತಿಯುತವಾಗಿ ಹೊರಟಿದ್ದ ಗಣೇಶನ ಮೆರವಣಿಗೆ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಅಲ್ಲಿನ ಇನ್‌ಸ್ಪೆಕ್ಟರ್ ಈ ಲಾಠಿ ಪ್ರಹಾರ ಮಾಡಿಸಿದ್ದಾರೆ. ಎರಡು ಗಣೇಶನ ಮೂರ್ತಿಗಳು ಮುಖಾಮುಖಿಯಾಗಿ ಬಂದಿದ್ದಕ್ಕೆ ಲಾಠಿ ಚಾರ್ಜ್ ಮಾಡಿಸಿದ್ದಾರೆ. ಎರಡು ಗಣೇಶನ ಮೂರ್ತಿಗಳು ಮುಖಾಮುಖಿಯಾಗಿ ಬರಬಾರದೇ? ಅಲ್ಲಿ ನಾನೇ ಬರ್ತೀನಿ ಗಟ್ಟಿಯಾಗಿ ನಿಂತು ಹೋರಾಟ ಮಾಡ್ತೀನಿ ಎಂದಿದ್ದಾರೆ.

ಈ ರಾಜ್ಯ ಸರ್ಕಾರ ಕಮ್ಯುನಲ್ ಕ್ರಿಮಿನಲ್‌ಗಳಿಗೆ ಸಪೋರ್ಟ್ ಮಾಡುತ್ತಿದೆ. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಕರೆದದ್ದು. ಧರ್ಮಸ್ಥಳದ ವಿಷಯದಲ್ಲಿ ಈ ಸರ್ಕಾರ ನಡೆದುಕೊಂಡದ್ದನ್ನು ನೋಡಿದರೆ ಈ ಸರ್ಕಾರ ಕಮ್ಯುನಲ್ ಕ್ರಿಮಿನಲ್‌ಗಳಿಗೆ ಪ್ರೋತ್ಸಾಹ ಕೊಡುತ್ತಿದೆ. ಗಣಪತಿ ಮೂರ್ತಿಗಳ ವಿಸರ್ಜನೆ ವೇಳೆ ಲಾಠಿ ಪ್ರಹಾರ ಮಾಡಿಸುತ್ತಿದೆ. ನೂರಾರು ನಿಬಂಧನೆಗಳನ್ನು ಈ ಸರ್ಕಾರ ಹಾಕುತ್ತಿದೆ. ಈ ಬಗ್ಗೆ ನಾನೇ ನಿಂತು ಹೋರಾಟ ಮಾಡುತ್ತೇನೆ ಎಂದಿದ್ದಾರೆ.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/09/2025 09:50 pm

Cinque Terre

54.79 K

Cinque Terre

21

ಸಂಬಂಧಿತ ಸುದ್ದಿ