", "articleSection": "Politics,Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/229640-1757384248-bgm2.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಜನರ ಆಶಾಕಿರಣ, ಶಕ್ತಿಕೇಂದ್ರಕ್ಕೆ ಇದೆಂತಹ ಗತಿ ಬಂತು ನೋಡಿ! ಸರ್ಕಾರ ಬದಲಿಸುವ ಶಕ್ತಿ ಇರೋ ರಾಜಕಾರಣಿಗಳಿಗೆ ಸು...Read more" } ", "keywords": "belagavi suvarna soudha, belagavi government building, suvarna soudha poor condition, suvarna soudha maintenance issue, suvarna soudha neglect, belagavi suvarna soudha news, karnataka assembly building belagavi, suvarna soudha 500 crore building, suvarna soudha maintenance fund, suvarna soudha controversy", "url": "https://dashboard.publicnext.com/node" }
ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಜನರ ಆಶಾಕಿರಣ, ಶಕ್ತಿಕೇಂದ್ರಕ್ಕೆ ಇದೆಂತಹ ಗತಿ ಬಂತು ನೋಡಿ! ಸರ್ಕಾರ ಬದಲಿಸುವ ಶಕ್ತಿ ಇರೋ ರಾಜಕಾರಣಿಗಳಿಗೆ ಸುವರ್ಣಸೌಧ ನಿರ್ವಹಣೆ ಮಾಡಿಸಲು ಆಗುತ್ತಿಲ್ಲ.
2012 ರಲ್ಲಿ ಉತ್ತರ ಕರ್ನಾಟಕ ಭಾಗದ ಜನರ ಧ್ವನಿಯಾಗಲು ನಿರ್ಮಾಣ ಆಗಿದ್ದ ಸುವರ್ಣ ವಿಧಾನ ಸೌಧ ಅಂದಿನಿಂದ ಇಂದಿನವರೆಗೆ ಕೇವಲ ಕಟ್ಟಡವಾಗಿಯೇ ಉಳಿದಿದೆ. ಆದರೆ, ಈ ಕಟ್ಟಡವನ್ನು ನಿರ್ವಹಣೆ ಮಾಡಲು ಆಗದೆ ಅಧಿಕಾರಿಗಳು ಪರದಾಟ ನಡೆಸಿದ್ದಾರೆ. ಶ್ವೇತವರ್ಣದಲ್ಲಿ ಮಿನುಗಬೇಕಾದ ಸುವರ್ಣಸೌಧ ಕಟ್ಟಡದ ಹೊರಭಾಗದಲ್ಲಿ ಕೆಂಪು ಮಿಶ್ರಿತ ಹಸಿರು ಪಾಚಿ ನಿರ್ಮಾಣ ಆಗಿದೆ.
ಸುಂದರ ಕಟ್ಟಡ ಸಹಜ ಸೌಂದರ್ಯ ಕಳೆದುಕೊಳ್ಳುತ್ತಿದೆ. ಹಸಿರು ಬಣ್ಣಕ್ಕೆ ತಿರುಗಿದರೂ ಸುವರ್ಣಸೌಧ ನಿರ್ವಹಣೆಯನ್ನೇ ಬೆಳಗಾವಿ ಜಿಲ್ಲಾಡಳಿತ ಮರೆತಿದೆ. ಉತ್ತರ ಕರ್ನಾಟಕ ಜನರ ಧ್ವನಿಯಾಗಬೇಕೆಂದು 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಶಕ್ತಿಸೌಧ ಇದೀಗ ಸತತ ಮಳೆಯಿಂದ ಸೌಧದ ಕಂಬಗಳು, ಚಾವಣಿ, ಹೊರಗಿನ ಗೋಡೆಗಳಿಗೆ ಹಸಿರು ಬಣ್ಣದ ಪಾಚಿಗಟ್ಟಿದೆ. ಪ್ರತಿವರ್ಷ ಸುವರ್ಣಸೌಧ ನಿರ್ವಹಣೆಗೆ ಕೋಟ್ಯಾಂತರ ರೂಪಾಯಿ ಅನುದಾನ ಮೀಸಲು ಇದ್ರೂ ಯಾಕೆ ನಿರ್ವಹಣೆ ಆಗ್ತಿಲ್ಲ ಎಂಬುವುದು ಈ ಭಾಗದ ಹೋರಾಟಗಾರರ ಪ್ರಶ್ನೆಯಾಗಿದೆ.
ಒಟ್ಟಿನಲ್ಲಿ ಕೋಟ್ಯಾಂತರ ಹಣ ವ್ಯಯಿಸಿದರೂ ಸರಿಯಾಗಿ ನಿರ್ವಹಣೆ ಕಾಣದೇ ಶಕ್ತಿಸೌಧ ಸೊರಗುತ್ತಿದೆ. ಬೆಂಗಳೂರಿನ ವಿಧಾನ ಸೌಧಕ್ಕೆ ಕೊಡುವ ಸೌಲಭ್ಯ ಈ ಉತ್ತರ ಕರ್ನಾಟಕದ ಸುವರ್ಣಸೌಧಕ್ಕೆ ಯಾಕಿಲ್ಲ? ಎಂಬುದು ಯಕ್ಷ ಪ್ರಶ್ನೆ ಆಗಿಯೆ ಉಳಿದಿದೆ.
-ಪ್ರಲ್ಹಾದ ಪೂಜಾರಿ, ಪಬ್ಲಿಕ್ ನೆಕ್ಸ್ಟ್, ಬೆಳಗಾವಿ
PublicNext
09/09/2025 07:48 am