ಚಾಮರಾಜನಗರ : ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಹೋಬಳಿಯ ಬೆಳಚಲವಾಡಿ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡಿದೆ.
ಸೋಮವಾರ ಸಂಜೆ ಏಕಾಏಕಿ ಗ್ರಾಮದ ಒಳಗಡೆ ನುಗ್ಗಿದೆ. ಕರಡಿಯನ್ನು ಕಂಡು ಭಯಭೀತರಾದ ಸ್ಥಳೀಯರು ಕೂಗಾಡಿದ ಪರಿಣಾಮ ಕರಡಿ ಪಕ್ಕದಲ್ಲಿದ್ದ ತೋಟದೊಳೆಗೆ ನುಗ್ಗಿದೆ.
ಕರಡಿಯ ಆಗಮನದಿಂದ ಭಯಗೊಂಡ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಇಲ್ಲಿಯವರೆಗೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ. ಇದರಿಂದ ಗ್ರಾಮಸ್ಥರು ಅರಣ್ಯಾಧಿಕಾರಿಗಳ ವಿರುದ್ದ ಬೇಸರ ಹೊರಹಾಕಿದ್ದಾರೆ.
Kshetra Samachara
09/09/2025 10:55 am