ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ತಾಯಿಯಿಲ್ಲದೇ ಮಗು ಗೋಳಾಟ – ನಾಪತ್ತೆಯಾದ ಮಾನಸಿಕ ಅಸ್ವಸ್ಥೆ!

ಕಡೂರು : ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ನಡೆದ ಘಟನೆ ಒಂದು ಕುಟುಂಬವನ್ನು ದುಃಖ ಸಾಗರದಲ್ಲಿ ಮುಳುಗಿಸಿದೆ.

ಗ್ರಾಮದ ವಿಜಯ್ ಕುಮಾರ್ ಅವರ ಪತ್ನಿ ಭಾರತಿ ಮಾನಸಿಕ ಅಸ್ವಸ್ಥೆ ಸೆಪ್ಟೆಂಬರ್ 4ರಂದು ಅಜ್ಜಿಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಮನೆಯಿಂದ ಹೋಗಿದ್ದು ನಂತರ ಅವರ ಸುಳಿವು ಸಿಕ್ಕಿಲ್ಲ. ಮನೆಯ ಮುದ್ದಾದ ಮಗು ತಾಯಿಯ ದಯೆ-ಮಮತೆಯಿಲ್ಲದೆ ಗೋಳಾಡುತ್ತಿದ್ದು, ಕುಟುಂಬದವರ ಕಣ್ಣೀರನ್ನು ತರಿಸುತ್ತಿದೆ.

ನಿರಂತರ ಹುಡುಕಾಟದ ಬಳಿಕವೂ ಪತ್ತೆಯಾಗದ ಕಾರಣ, ಪತಿ ವಿಜಯ್ ಕುಮಾರ್ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪತ್ನಿ ಪತ್ತೆಯಾಗಲೆಂದು ಕಾತರದಿಂದ ಕಾದು ಕುಳಿತಿದ್ದಾರೆ.

ತಾಯಿ ಮಡಿಲಿಲ್ಲದೆ ಮಗು ಕಣ್ಣೀರು ಹಾಕುತ್ತಿರುವ ದೃಶ್ಯ ಗ್ರಾಮಸ್ಥರ ಹೃದಯವನ್ನೇ ಕಲುಕಿದೆ. ಹೀಗಾಗಿ ಭಾರತಿ ಪತ್ತೆಗೆ ಸಾರ್ವಜನಿಕರು ಸಹಕರಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ

Edited By :
PublicNext

PublicNext

09/09/2025 12:15 pm

Cinque Terre

8.68 K

Cinque Terre

0