", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/229640-1757385400-ckm.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು: ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ ಯೇಸು ಕ್ರಿಸ್ತರ ಜನ್ಮದಾತೆ ಮಾತೆ ಮರಿಯಮ್ಮನ ಜನ್ಮದಿನವನ್ನು ಇಂದು ಕಾಫಿನಾಡು ಚಿಕ್ಕಮಗಳೂರಿ...Read more" } ", "keywords": "chikkamagaluru monti fest, monti fest celebration, chikkamagaluru festival news, monti fest history 200 years, monti fest chikkamagaluru, christian festival chikkamagaluru, monti fest tradition, monti fest cultural celebration, monti fest 200 years, chikkamagaluru cultural festival", "url": "https://dashboard.publicnext.com/node" }
ಚಿಕ್ಕಮಗಳೂರು: ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ ಯೇಸು ಕ್ರಿಸ್ತರ ಜನ್ಮದಾತೆ ಮಾತೆ ಮರಿಯಮ್ಮನ ಜನ್ಮದಿನವನ್ನು ಇಂದು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕ್ರೈಸ್ತರು ಶ್ರದ್ದಾ ಭಕ್ತಿಯಿಂದ ಆಚರಿಸಿದ್ದಾರೆ.
ಕೂದುವಳ್ಳಿಯ ಲೂರ್ದ್ ಚರ್ಚ್‌ನಲ್ಲಿ ವಿಶೇಷ ಪೂಜೆ ನಡೆಯಿತು. ಭಕ್ತರು ಬಾಲಿಕ ಮರಿಯಮ್ಮನಿಗೆ ಹೂವನ್ನು ಅರ್ಪಿಸಿ ವಂದಿಸಿದರು. ಹಬ್ಬದ ಆಚರಣೆಗೆ ಮೊದಲು ಒಂಭತ್ತು ದಿನಗಳ ಕಾಲ ನವೇನಾವನ್ನು ಆಚರಿಸಲಾಗುತ್ತದೆ. ಈ ದಿನಗಳಲ್ಲಿ ಭಕ್ತರು ತಮ್ಮ ಮನೆಗಳ ಹೂತೋಟಗಳಿಂದ ಬಣ್ಣ ಬಣ್ಣದ ಹೂಗಳನ್ನು ತಂದು ಬಾಲಿಕ ಮರಿಯಮ್ಮನವರಿಗೆ ಅರ್ಪಿಸುತ್ತಾರೆ. ಈ ಸಂಸ್ಕೃತಿಯನ್ನು ಕ್ರೈಸ್ತರು 200 ವರ್ಷಗಳಿಂದ ಆಚರಿಸಿಕೊಂಡು ಬಂದಿರುವುದು ವಿಶೇಷ
ಇನ್ನು ಕ್ರೈಸ್ತರ ಎಲ್ಲಾ ಹಬ್ಬಗಳಲ್ಲಿ ನಾನ್ ವೆಜ್ ಊಟ ಕಾಮನ್. ಆದ್ರೆ ಈ ಹಬ್ಬವನ್ನು ತೆನೆ ಹಬ್ಬವನ್ನಾಗಿ ಆಚರಿಸುತ್ತಾರೆ. ತಮ್ಮ ಗದ್ದೆ, ತೋಟಗಳಲ್ಲಿ ಬೆಳೆದ ಹೊಸ ಬೆಳೆ ಮತ್ತು ಧವಸ ಧಾನ್ಯಗಳನ್ನು ಕಟಾವು ಮಾಡಿ ಮೊದಲು ದೇವರಿಗೆ ಆರ್ಪಿಸುತ್ತಾರೆ. ಬಳಿಕ ಭತ್ತವನ್ನು ಮನೆಗೆ ತಂದು ಮನೆಯಲ್ಲಿ ಪ್ರಾರ್ಥನೆ ನಡೆಸಿ ಭತ್ತವನ್ನು ಹಾಲಿನೊಂದಿಗೆ ಬೆರಸಿ ಕುಡಿಯುತ್ತಾರೆ. ಅಲ್ಲದೆ ವಿವಿಧ ಬಗೆಯ ತರಕಾರಿಯ ಅಡುಗೆ ತಯಾರಿಸಿ ಮನೆ ಮಂದಿಯೆಲ್ಲ ಒಟ್ಟಿಗೆ ಊಟ ಮಾಡಿ ಸಂಭ್ರಮದಿಂದ ಹಬ್ಬವನ್ನು ಆಚರಿಸುವುದು ಕೊಂಕಣಿ ಕ್ರೈಸ್ತರ ಸಂಪ್ರದಾಯ. ಆದರೆ ಬದಲಾದ ಕಾಲಮಾನದಲ್ಲಿ ಚರ್ಚ್‌ನಲ್ಲೇ ಭಕ್ತರರೆಲ್ಲರೂ ಊಟ ಮಾಡುತ್ತಾರೆ. ಇದನ್ನು ಮೊಂತಿ ಫೆಸ್ಟ್, ಹೊಸಕ್ಕಿ ಹಬ್ಬ ಎಂತಲೂ ಕರೆಯಲಾಗುತ್ತದೆ .
ಒಟ್ಟಾರೆ ಕ್ರೈಸ್ತರು 200 ವರ್ಷಗಳ ಪುರಾತನ ಸಂಸ್ಕೃತಿಯನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದು ಕರಾವಳಿ ಹಾಗೂ ಮಲೆನಾಡಿನಲ್ಲಿ ಈ ಹಬ್ಬದ ಆಚರಣೆಗೆ ಕ್ರೈಸ್ತರೂ ವಿಶೇಷ ಪ್ರಾತಿನಿಧ್ಯತೆ ನೀಡಿ ಮುಂದಿನ ಪೀಳಿಗೆಗೂ ಹಬ್ಬದ ಮಹತ್ವವನ್ನು ಪರಿಚಯಿಸಿದ್ದಾರೆ.
ಡ್ಯಾನಿ, ಪಬ್ಲಿಕ್ ನೆಕ್ಸ್ಟ್ , ಚಿಕ್ಕಮಗಳೂರು
PublicNext
09/09/2025 08:06 am