", "articleSection": "Politics,Law and Order", "image": { "@type": "ImageObject", "url": "https://prod.cdn.publicnext.com/s3fs-public/474799-1757338491-yutube1920.01_59_29_19.Still3739.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು: ಮದ್ದೂರು ಗಣಪತಿ ವಿಸರ್ಜನೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ವಿಧಾನ ...Read more" } ", "keywords": "chikkamagaluru, maddur stone pelting case, ct ravi statement, communal tension, religious extremism, political remark, chikkamagaluru news, kannada headline ", "url": "https://dashboard.publicnext.com/node" } ಚಿಕ್ಕಮಗಳೂರು: ಮದ್ದೂರು ಕಲ್ಲು ತೂರಾಟ ಪ್ರಕರಣ : ಶಾಂತಿ ಧೂತರ ವೇಷದ ಹಿಂದೆ ಮತಾಂಧರ ನಾಟಕ – ಸಿ. ಟಿ. ರವಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಮದ್ದೂರು ಕಲ್ಲು ತೂರಾಟ ಪ್ರಕರಣ : ಶಾಂತಿ ಧೂತರ ವೇಷದ ಹಿಂದೆ ಮತಾಂಧರ ನಾಟಕ – ಸಿ. ಟಿ. ರವಿ

ಚಿಕ್ಕಮಗಳೂರು: ಮದ್ದೂರು ಗಣಪತಿ ವಿಸರ್ಜನೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ, ಇತ್ತೀಚಿನ ಕಲ್ಲು ತೂರಾಟ ಹಾಗೂ ಅಶಾಂತಿ ಘಟನೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ಕಾರ್ಯವೈಖರಿಯನ್ನು ಪ್ರಶ್ನಿಸಿದ ಅವರು, ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳದೆ, ಶಾಂತಿಯುತವಾಗಿ ಪ್ರತಿಭಟನೆ ಮಾಡಿದವರ ಮೇಲೆಯೇ ಲಾಠಿ ಚಾರ್ಜ್ ಮಾಡಿರುವುದು ಅಸಹ್ಯಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ವರ್ಷ ನಡೆದ ನಾಗಮಂಗಲ ಘಟನೆಗೆ ಉಲ್ಲೇಖ ಮಾಡುತ್ತಾ, ಅಲ್ಲಿ ಪೆಟ್ರೋಲ್ ಬಾಂಬ್ ಎಸೆದು 30ಕ್ಕೂ ಹೆಚ್ಚು ಅಂಗಡಿಗಳನ್ನು ಗುರಿಯಾಗಿಸಿದ್ದರು. ಇಂತಹ ಗಂಭೀರ ಘಟನೆಗಳು ನಡೆದಿದ್ದರೂ, ಸರ್ಕಾರ ಮುಂಜಾಗ್ರತೆ ವಹಿಸುವಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ. ಜಿಲ್ಲೆಯಲ್ಲೇ ಬಂದೋಬಸ್ತ್ ವ್ಯವಸ್ಥೆ ಮಾಡಬೇಕಿತ್ತು, ಆದರೆ ಅದನ್ನು ಮಾಡದೇ ಬಿಡಲಾಗಿದೆ ಎಂದು ಸರ್ಕಾರದ ನಿರ್ಲಕ್ಷ್ಯವನ್ನು ತೀವ್ರವಾಗಿ ಟೀಕಿಸಿದರು. ಮುಖ್ಯಮಂತ್ರಿಯವರ ಈದ್ ಮಿಲಾದ್ ಭಾಷಣವನ್ನು ಉಲ್ಲೇಖಿಸಿದ ಅವರು, ನೀವು ಇಸ್ಲಾಂ ಅಂದರೆ ಶಾಂತಿ, ಮಹಮ್ಮದ್ ಪೈಗಂಬರ್ ಶಾಂತಿಯ ಧೂತ ಎಂದು ಹೇಳಿದ್ದೀರಿ. ಆದರೆ, ನಿಮ್ಮ ದೃಷ್ಟಿಯಲ್ಲಿ ದಲಿತ ಶಾಸಕರ ಮನೆ ಸುಟ್ಟ ಘಟನೆ, ಠಾಣೆಗೆ ಬೆಂಕಿ ಹಚ್ಚಿದ ಘಟನೆಗಳು, ಕೆ. ಜಿ. ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಸಂದರ್ಭಗಳು ಶಾಂತಿಯ ಕೆಲಸವೆಂದೇನಾದರೂ ತೋರುತ್ತವೆಯಾ? ಎಂದು ಪ್ರಶ್ನಿಸಿದರು.

ಧರ್ಮಸ್ಥಳ ಪ್ರಕರಣಕ್ಕೆ ಎಸ್‌ಐಟಿ ರಚಿಸಿದ್ದರೆ, ಸಾಗರದಲ್ಲಿ ಮಕ್ಕಳ ಮನಸ್ಸಿನಲ್ಲಿ ದ್ವೇಷದ ಬೀಜ ಬಿತ್ತಿದ ಘಟನೆ ಕುರಿತೂ ಎಸ್‌ಐಟಿ ತನಿಖೆ ನಡೆಸಬೇಕು. ಶಾಂತಿ ಧೂತರು ಯಾರು, ಮತಾಂಧರು ಯಾರು, ಜಗತ್ತಿನಲ್ಲಿ ಹಿಂಸೆ ಹರಡುತ್ತಿರುವವರು ಯಾರು ಎಂಬ ಸತ್ಯ ಹೊರಬರಬೇಕು ಎಂದು ಸಿ. ಟಿ. ರವಿ ಒತ್ತಾಯಿಸಿದರು.

ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ನೀತಿಯೇ ಈಗಿನ ಸರ್ಕಾರದ ನಿಲುವಾಗಿದೆ. ಹಿಂದೂಗಳಿಗೆ ನಿರ್ಬಂಧ, ಮುಸ್ಲಿಮರಿಗೆ ಅನುಕೂಲ ಎಂಬ ಪರಂಪರೆ ಮುಂದುವರಿಯುತ್ತಿದೆ. ಮೈಕ್ ಹಾಕಿದ್ರೆ ಕಂಡಿಷನ್, ನೃತ್ಯ ಮಾಡಿದ್ರೆ ಕೇಸ್ – ಇವು ಎಲ್ಲವೂ ಕೆಟ್ಟ ಪರಂಪರೆಗೆ ಕಾರಣವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Edited By :
PublicNext

PublicNext

08/09/2025 07:04 pm

Cinque Terre

12.03 K

Cinque Terre

1

ಸಂಬಂಧಿತ ಸುದ್ದಿ