", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/474799-1757325044-tilk_tolk.00_42_51_23.Still1025.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು : ಮಲೆನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಗಾಳಿ-ಮಳೆಯೂ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಶೃಂಗೇರಿ ತಾಲೂಕಿನ ಹುಲುಗಾರ್ಬೈ...Read more" } ", "keywords": "chikkamagaluru, heavy rain, mother and newborn, risky crossing, wooden log bridge, flood situation, life threatening incident, chikkamagaluru news, kannada headline ", "url": "https://dashboard.publicnext.com/node" }
ಚಿಕ್ಕಮಗಳೂರು : ಮಲೆನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಗಾಳಿ-ಮಳೆಯೂ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಶೃಂಗೇರಿ ತಾಲೂಕಿನ ಹುಲುಗಾರ್ಬೈಲು ಗ್ರಾಮದಲ್ಲಿ ಕಾಲು ಸಂಕ ಮಳೆ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು, ಹಳ್ಳಿಗರು ಓಡಾಡಲು ರಸ್ತೆ ಇಲ್ಲದೇ ಪರದಾಡುವಂತಾಗಿದೆ. ಈ ನಡುವೆ ಹೃದಯ ಕಲುಕುವ ಘಟನೆಯೊಂದು ನಡೆದಿದೆ.
ಮಗುವಿಗೆ ಲಸಿಕೆ ಹಾಕಿಸಲು ಹೊರಟ ತಾಯಿ, ಜೀವ ಪಣಕ್ಕಿಟ್ಟು ಮರದ ದಿಮ್ಮಿಯ ಮೇಲೆ ಹಗ್ಗದ ಜೊತೆಗೆ ಛತ್ರಿ ಹಿಡಿದು ಸಾಗಬೇಕಾದ ಪರಿಸ್ಥಿತಿ ಎದುರಾಯಿತು. ತಂದೆಯೂ ಹಸುಗೂಸನ್ನು ಎತ್ತಿಕೊಂಡು ಮರದ ದಿಮ್ಮಿಯ ಮೇಲೆ ಸಾಗಿದ ಘಟನೆ ಸ್ಥಳೀಯರಲ್ಲಿ ಭಾವುಕತೆ ಮೂಡಿಸಿದೆ. ರಸ್ತೆ ಸಂಪರ್ಕ ಕಡಿತವಾದ ಹಳ್ಳಿಗರು ಪ್ರತಿದಿನವೂ ಇದೇ ರೀತಿ ಅಪಾಯವನ್ನು ಎದುರಿಸುತ್ತಿದ್ದು, ಮೂಲಭೂತ ಸೌಲಭ್ಯಗಳ ಕೊರತೆ ಮಳೆಗಾಲದಲ್ಲಿ ಅವರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ.
PublicNext
08/09/2025 03:20 pm