", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/405356-1757333967-c.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಈ ಬಾರಿ ಸುರಿದ ಧಾರಾಕಾರ ಮಳೆಗೆ ವಾಹನ ಸಂಚಾರ ಕಷ್ಟಕರವಾಗಿದೆ. ಶೃಂಗೇರಿ ಕ್ಷೇತ್ರದಲ್ಲಿ ರಸ್ತೆಗಳು ಹದಗೆಟ್ಟಿ...Read more" } ", "keywords": "Chikkamagaluru MLA Rajegowda, poor road conditions, Malenadu region, pothole issues, road infrastructure development, Chikkamagaluru news, rural road problems, politician's statement on roads.", "url": "https://dashboard.publicnext.com/node" } ಚಿಕ್ಕಮಗಳೂರು: ಮಲೆನಾಡಿನಲ್ಲಿ ಹದಗೆಟ್ಟ ರಸ್ತೆಗಳು- ಭಾರಿ ಗುಂಡಿಗಳ ಬಗ್ಗೆ ಶಾಸಕ ರಾಜೇಗೌಡ ಹೇಳಿದ್ದು ಹೀಗೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಮಲೆನಾಡಿನಲ್ಲಿ ಹದಗೆಟ್ಟ ರಸ್ತೆಗಳು- ಭಾರಿ ಗುಂಡಿಗಳ ಬಗ್ಗೆ ಶಾಸಕ ರಾಜೇಗೌಡ ಹೇಳಿದ್ದು ಹೀಗೆ

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಈ ಬಾರಿ ಸುರಿದ ಧಾರಾಕಾರ ಮಳೆಗೆ ವಾಹನ ಸಂಚಾರ ಕಷ್ಟಕರವಾಗಿದೆ. ಶೃಂಗೇರಿ ಕ್ಷೇತ್ರದಲ್ಲಿ ರಸ್ತೆಗಳು ಹದಗೆಟ್ಟಿದ್ದು, ವಾಹನ ಸವಾರರು ಹರಸಾಹಸ ಪಡುವಂತಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಮಲೆನಾಡಲ್ಲಿ ಭಾರಿ ಮಳೆ ಹೆಚ್ಚಾಗಿರುವ ಜೊತೆಗೆ ವಾಹನಗಳ ಓಡಾಟವೂ ಹೆಚ್ಚಳಗೊಂಡಿದೆ. ಈಗಾಗಲೇ ಮುಖ್ಯಮಂತ್ರಿಗಳು ವಿಶೇಷ ಅನುದಾನವೆಂದು ಎಂಟು ಕೋಟಿ ಬಿಡುಗಡೆ ಮಾಡಿದ್ದಾರೆ.

ರಸ್ತೆಗುಂಡಿ ಮುಚ್ಚಲು ವಿಟ್ ಮಿಕ್ಸ್ ಜೊತೆಗೆ ಸಿಮೆಂಟ್ ಮಿಶ್ರಣ ಮಾಡಿ ಮೂರು ಬಾರಿ ಗುಂಡಿಗಳನ್ನು ಮುಚ್ಚಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಮಳೆ ಕಡಿಮೆಯಾದ ಕೂಡಲೇ ತೀರಾ ಹದಗೆಟ್ಟಿರುವ ಕಡೆ ರಸ್ತೆಗಳನ್ನು ಮರು ಡಾಂಬರೀಕರಣ ಮಾಡಲಾಗುವುದು. ಜೊತೆಗೆ ಗುಂಡಿ ಮುಚ್ಚುವ ಕಾರ್ಯವನ್ನು ಮಾಡಲಾಗುವುದು ಎಂದು ಶಾಸಕ ರಾಜೇಗೌಡ ತಿಳಿಸಿದ್ದಾರೆ. ಮಲೆನಾಡು ಭಾಗದಲ್ಲಿ ರಸ್ತೆಗಳು ತೀರಾ ಹದಗೆಟ್ಟಿರುವುದರಿಂದ ಸರ್ಕಾರ, ಮಲೆನಾಡಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

Edited By : Vinayak Patil
PublicNext

PublicNext

08/09/2025 05:49 pm

Cinque Terre

9.57 K

Cinque Terre

0

ಸಂಬಂಧಿತ ಸುದ್ದಿ