", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/41912020250906095002filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "9481623116" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು: ರಾಜ್ಯದ ಪಂಚ ಗ್ಯಾರಂಟಿಗಳೆಲ್ಲವೂ ನಿರಂತರವಾಗಿ ಜಾರಿಯಾಗುತ್ತಿದ್ದು 22 ಮತ್ತು 23ನೇ ಗೃಹಲಕ್ಷ್ಮಿ ಯೋಜನೆ ಕಂತುಗಳು ನವರಾತ್ರಿಗೂ ಮ...Read more" } ", "keywords": "Node", "url": "https://dashboard.publicnext.com/node" }
ಚಿಕ್ಕಮಗಳೂರು: ರಾಜ್ಯದ ಪಂಚ ಗ್ಯಾರಂಟಿಗಳೆಲ್ಲವೂ ನಿರಂತರವಾಗಿ ಜಾರಿಯಾಗುತ್ತಿದ್ದು 22 ಮತ್ತು 23ನೇ ಗೃಹಲಕ್ಷ್ಮಿ ಯೋಜನೆ ಕಂತುಗಳು ನವರಾತ್ರಿಗೂ ಮೊದಲು ಕುಟುಂಬದ ಯಜಮಾನಿಯರ ಖಾತೆಗೆ ಜಮೆ ಆಗಲಿದೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಹೇಳಿದರು. ನಗರದ ತಾಲೂಕು ಸಭಾಂಗಣದಲ್ಲಿ ನಡೆದ ತಾಲೂಕು ಗ್ಯಾರಂಟಿ ಪ್ರಾಧಿಕಾರ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಅವರು ತಾಲೂಕು ಅಧ್ಯಕ್ಷರ ನೇತೃತ್ವದ ತಂಡ ಚಿಕ್ಕಮಗಳೂರಿನಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಕುಟುಂಬದ ನಿರ್ವಹಣೆ, ಗೃಹೋಪಯೋಗಿ ವಸ್ತುಗಳ ಖರೀದಿ, ಮಕ್ಕಳ ವಿದ್ಯಾಭ್ಯಾಸ ಹಾಗೂ ದೈನಂದಿನ ಖರ್ಚುವೆಚ್ಚಗಳಿಗೆ ಗೃಹ ಲಕ್ಷ್ಮಿ ಯೋಜನೆ ಬಹಳಷ್ಟು ಸಹಕಾರಿಯಾಗಿದೆ ಎಂದರು.
ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಮಲ್ಲೇಶಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ 69ಸಾವಿರ ಯಜಮಾನಿಯರಿಗೆ ಗೃಹಲಕ್ಷ್ಮಿ ಸೌಲಭ್ಯ ದೊರೆಯುತ್ತಿದ್ದು, ಅದರ ಮಾಸಿಕ ಮೊತ್ತ 13.95 ರೂ.ಕೋಟಿ ಆಗಿದೆ. ಗೃಹಜ್ಯೋತಿ ಯೋಜನೆಯಡಿ 84 ಸಾವಿರ ಮೀಟರ್‌ಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದು ಇದರ ಮೊತ್ತ 3.53 ಕೋಟಿ ರೂ. ಆಗಿದೆ ಎಂದು ಅವರು ಮಾಹಿತಿ ನೀಡಿದರು.
ಶಕ್ತಿ ಯೋಜನೆಯಡಿ ಈವರೆಗೆ 15 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು ಸುಮಾರು 12 ಕೋಟಿ ರೂ. ಮೊತ್ತವನ್ನು ಸರಕಾರ ಸಾರಿಗೆ ಇಲಾಖೆಗೆ ಭರಿಸಿದೆ. ಅನ್ನಭಾಗ್ಯ ಯೋಜನೆಯಡಿ 48476 ಪಡಿತರ ಕಾರ್ಡ್ 11.51 ಲಕ್ಷ ಜನರಿಗೆ ಮಾಸಿಕ 10 ಕೆಜಿ ಅಕ್ಕಿ ಯುವನಿಧಿಯಡಿ ನೀಡಲಾಗುತ್ತಿದೆ. ನೋಂದಣಿಗೊಂಡ 136 ಫಲಾನುಭವಿಗಳು ಯುವನಿಧಿ ಸೌಲಭ್ಯ ಲಭಿಸಿದೆ ಎಂದರು.
Kshetra Samachara
06/09/2025 09:50 pm