", "articleSection": "Nature,Government,Agriculture", "image": { "@type": "ImageObject", "url": "https://prod.cdn.publicnext.com/s3fs-public/474798-1757408099-avishkara.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "Vinay.Hegde" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾಡಾನೆ ಮಾನವ ಸಂಘರ್ಷ ವಿಪರೀತವಾಗಿದೆ ರೈತರು ಬೆಳೆಗಾರರು ದಿನ ಬೆಳಗಾದ್...Read more" } ", "keywords": "Chikkamagaluru, human-elephant conflict, new device invention, wildlife conflict solution, private company innovation, elephant protection device, Karnataka forest news, Chikkamagaluru news, human-wildlife coexistence, elephant safety, forest technology India, Karnataka innovation", "url": "https://dashboard.publicnext.com/node" }
ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾಡಾನೆ ಮಾನವ ಸಂಘರ್ಷ ವಿಪರೀತವಾಗಿದೆ ರೈತರು ಬೆಳೆಗಾರರು ದಿನ ಬೆಳಗಾದ್ರೆ ಸಾಕು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳೋಕ್ಕೆ ಹರಸಾಹಸ ಪಡುವಂತಾಗಿದೆ.
ಕಾಡುಪ್ರಾಣಿಗಳ ಹಾವಳಿ, ಕಾಡಿನಿಂದ ತೋಟಗಳಿಗೆ ಲಗ್ಗೆ ಇಡೋ ಕಾಡಾನೆಗಳ ಹಿಂಡು ಕಾಫಿ, ಅಡಕೆ, ಬಾಳೆ ಬೆಳೆಗಳನ್ನ ನಾಶ ಮಾಡುತ್ತಿವೆ. ವರ್ಷ ಪೂರ್ತಿ ಕಷ್ಟಪಟ್ಟು ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ ಫಸಲು ನಾಶವಾಗುತ್ತಾ ಇರೋದ್ರಿಂದ ರೈತರು ಕಂಗಾಲಾಗಿದ್ದಾರೆ. ಜೊತೆಗೆ ಆನೆಗಳು ಮನುಷ್ಯರ ಮೇಲೂ ಎರಗಿ ಪ್ರಾಣ ಹಾನಿ ಮಾಡುತ್ತಿವೆ. ಇದನ್ನೆಲ್ಲಾ ಗಮನಿಸಿದ ಕೆನೆಟ್ ಎಂಬ ಖಾಸಗಿ ಸಂಸ್ಥೆಯೊಂದು ರೈತರ ಸಮಸ್ಯೆಗೆ ಬ್ರೇಕ್ ಹಾಕಲು ಹೊಸ ಡಿವೈಸ್ ಕಂಡು ಹಿಡಿದಿದೆ.
ಹೌದು... ಬೆಂಗಳೂರು ಮೂಲದ ಕೆನೆಟ್ ಎಂಬ ಖಾಸಗಿ ಕಂಪೆನಿ ರೈತರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಮೂರು ಡಿವೈಸ್‌ಗಳನ್ನ ಕಂಡು ಹಿಡಿದಿದೆ.
ಒಂದು ಅಬ್ಬರದ ಶಬ್ದ ಮಾಡುವ ಸೈರನ್, ಇನ್ನೊಂದು ಪ್ರಕಾಶಮಾನವಾದ ಬೆಳಕು ಚೆಲ್ಲುವ ಲೈಟ್, ಮತ್ತೊಂದು ಅಟೋಮ್ಯಾಟಿಕ್ ಶಬ್ದ ಮಾಡುವ ಗನ್, ಇವೆಲ್ಲಾವು ಸೆನ್ಸಾರ್ ಮೂಲಕ ವರ್ಕ್ ಮಾಡಲಿದ್ದು, ಈ ಬಗ್ಗೆ ಎನ್.ಆರ್ ಪುರ ಭಾಗದಲ್ಲಿ ರೈತರು ಹಾಗೂ ಬೆಳಗಾರರಿಗೆ ಮಾಹಿತಿಯನ್ನು ನೀಡಲಾಗಿದೆ.
ಅಲ್ಲದೆ ಮಡಿಕೇರಿಯಲ್ಲಿ ಅಳವಡಿಸಿರುವ ಈ ಡಿವೈಸ್‌ಗಳು ಯಶಸ್ವಿಯಾಗಿದೆ ಎನ್ನಲಾಗಿದೆ. ಈ ಬಗ್ಗೆ ಶಾಸಕ ರಾಜೇಗೌಡ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಗಮನಕ್ಕೂ ತಂದು ಚರ್ಚೆ ನಡೆಸಿದ್ದು, ಇನ್ನೊಂದು ಬಾರಿ ಅರಣ್ಯ ಸಚಿವರ ಸಮ್ಮುಖದಲ್ಲಿ ಡೆಮೋ ನಡೆಸಿ ಪ್ರಾಯೋಗಿಕವಾಗಿ ಅಳವಡಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ರಾಜೇಗೌಡ ತಿಳಿಸಿದ್ದಾರೆ.
ಈಗಾಗಲೇ ಆನೆಗಳಿಂದ ಸಾಕಷ್ಟು ಬೆಳೆಗಳನ್ನ ಕಳೆದುಕೊಂಡು ನಷ್ಟ ಅನುಭವಿಸಿರೋ ರೈತರು ಒಮ್ಮೆ ಪರಿಹಾರ ಸಿಕ್ಕಿದ್ರೆ ಸಾಕಪ್ಪ ಅಂತಿದ್ದಾರೆ. ಇದರ ನಡುವೆ ರೈತರಿಗೆ ಈ ಡಿವೈಸ್‌ಗಳು ಎಷ್ಟರ ಮಟ್ಟಿಗೆ ಉಪಯೋಗವಾಗುತ್ತೆ ಅನ್ನೋದು ಕಾದು ನೋಡಬೇಕಾಗಿದೆ..
ಡ್ಯಾನಿ, ಪಬ್ಲಿಕ್ ನೆಕ್ಸ್ಟ್, ಚಿಕ್ಕಮಗಳೂರು.
PublicNext
09/09/2025 02:25 pm