ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಕಾಫಿನಾಡಲ್ಲಿ ಸ್ಪಷ್ಟವಾಗಿ ಗೋಚರಿಸಿದ ಖಗ್ರಾಸ ಚಂದ್ರಗ್ರಹಣ

ಚಿಕ್ಕಮಗಳೂರು: ನಿನ್ನೆ ರಾತ್ರಿ ಆಕಾಶದಲ್ಲಿ ಅಪರೂಪದ ಖಗ್ರಾಸ ಚಂದ್ರಗ್ರಹಣ ಎಲ್ಲರ ಮನ ಸೆಳೆಯಿತು. ಸದಾ ಹಾಲಿನಂತೆ ಜ್ಯೋತಿರ್ಮಯವಾಗಿ ಹೊಳೆಯುತ್ತಿದ್ದ ಚಂದ್ರ, ಈ ಬಾರಿ ಅಕ್ಷರಶಃ ಬೆಂಕಿಚೆಂಡಿನಂತೆ ಕಾಣಿಸಿಕೊಂಡು ವಿಜ್ಞಾನಾಸಕ್ತರು ಮತ್ತು ಸಾಮಾನ್ಯ ಜನರನ್ನು ನಿಬ್ಬೆರಗುಗೊಳಿದನು. ಮೂರು ಗಂಟೆಗೂ ಹೆಚ್ಚು ಕಾಲ ಚಿಕ್ಕಮಗಳೂರಿನಲ್ಲಿ ಗ್ರಹಣ ಸುದೀರ್ಘವಾಗಿ ಗೋಚರಿಸಿತು. ಈ ಅವಧಿಯಲ್ಲಿ ಭೂಮಿ, ಸೂರ್ಯ ಮತ್ತು ಚಂದ್ರನು ಒಂದೇ ಸಾಲಿನಲ್ಲಿ ಬಂದು, ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದ ಪರಿಣಾಮ ಚಂದ್ರನ ನಿಜ ರೂಪ ಬದಲಾಗಿತ್ತು.

ಈ ಅಪರೂಪದ ದೃಶ್ಯವನ್ನು ಜನರು ನಗರದ ತಮ್ಮ ಮನೆಗಳ ಮೇಲ್ಛಾವಣಿ, ಮೈದಾನಗಳು ಹಾಗೂ ದೇವಸ್ಥಾನ ಆವರಣಗಳಿಂದ ಕಣ್ತುಂಬಿಕೊಂಡರು. ಅನೇಕರು ಮೊಬೈಲ್ ಮತ್ತು ಕ್ಯಾಮೆರಾಗಳಲ್ಲಿ ಈ ಅದ್ಭುತ ಕ್ಷಣಗಳನ್ನು ಸೆರೆಹಿಡಿದರು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರಗ್ರಹಣದ ಅವಧಿಯಲ್ಲಿ ಉಪವಾಸ, ಪಾರಾಯಣ, ಜಪ-ತಪಗಳು ಮಹತ್ವ ಪಡೆಯುತ್ತವೆ. ಹೀಗಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ ಹಾಗೂ ಹೋಮಗಳು ನೆರವೇರಿಸಲ್ಪಟ್ಟವು.

Edited By : PublicNext Desk
PublicNext

PublicNext

08/09/2025 10:14 am

Cinque Terre

13.27 K

Cinque Terre

0

ಸಂಬಂಧಿತ ಸುದ್ದಿ