ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪ: ಮಳೆ ವಿರಾಮ ನೀಡಿದ ಬಳಿಕ ಮಲೆನಾಡಲ್ಲಿ ಹೆಚ್ಚಾದ ಹಾವುಗಳ ಕಾಟ

ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ವಿರಾಮ ನೀಡಿದ ಬಳಿಕ ಹಾವುಗಳ ಕಾಟ ಹೆಚ್ಚಾಗಿದೆ. ಕೊಪ್ಪ, ಶೃಂಗೇರಿ ಭಾಗದಲ್ಲಿ ಹೆಬ್ಬಾವುಗಳು ನಿರಂತರವಾಗಿ ಕಾಣಿಸಿಕೊಳ್ಳುತ್ತಿವೆ. ತಾಲೂಕಿನ ಕಲ್ಕೆರೆ ಮುಖ್ಯ ರಸ್ತೆಯ ಸಮೀಪ ರಾತ್ರಿ ಭಾರೀ ಗಾತ್ರದ ಹೆಬ್ಬಾವು ವಾಹನ ಸವಾರರಿಗೆ ಕಾಣಿಸಿಕೊಂಡಿದೆ. ಹಾವು ಚಲಿಸುವವರೆಗೂ ವಾಹನ ಸವಾರರು ನಿಂತು ಬಳಿಕ ಮುಂದೆ ಸಾಗಿದ್ದಾರೆ. ಎರಡು ದಿನಗಳ ಹಿಂದಷ್ಟೇ ಶೃಂಗೇರಿ ತಾಲೂಕಿನ ಮುಂಡಗೋಡು ಬಳಿ ಭಾರೀ ಗಾತ್ರದ ಹೆಬ್ಬಾವು ಮನೆ ಬಳಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಮಳೆ ಕಡಿಮೆಯಾದ ಬಳಿಕ ಮಲೆನಾಡಿಗರಿಗೆ ಹಾವಿನ ಕಾಟ ಆರಂಭಗೊಂಡಿದೆ.

Edited By : PublicNext Desk
Kshetra Samachara

Kshetra Samachara

07/09/2025 08:27 am

Cinque Terre

860

Cinque Terre

0

ಸಂಬಂಧಿತ ಸುದ್ದಿ