", "articleSection": "Nature", "image": { "@type": "ImageObject", "url": "https://prod.cdn.publicnext.com/s3fs-public/405356-1757240066-pu.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಎನ್.ಆರ್ ಪುರ: ಕಾಫಿನಾಡ ಮಲೆನಾಡ ಭಾಗದಲ್ಲಿ ಕಾಡಾನೆಗಳ ಉಪಟಳದಿಂದ ಕೃಷಿಕರಿಗೆ ದಿಕ್ಕೆ ತೋಚದಂತಾಗಿದೆ. ತಾಲೂಕಿನ ತುಪ್ಪೂರು, ಅರಳಿಕೊಪ್ಪ, ಸಿಗಸೆ ...Read more" } ", "keywords": "Chikkamagaluru wild elephant attacks, areca nut plantation damage, crop destruction by elephants, farmer's plight, wildlife-human conflict, Chikkamagaluru news, Karnataka elephant menace, agricultural damage.", "url": "https://dashboard.publicnext.com/node" }
ಎನ್.ಆರ್ ಪುರ: ಕಾಫಿನಾಡ ಮಲೆನಾಡ ಭಾಗದಲ್ಲಿ ಕಾಡಾನೆಗಳ ಉಪಟಳದಿಂದ ಕೃಷಿಕರಿಗೆ ದಿಕ್ಕೆ ತೋಚದಂತಾಗಿದೆ. ತಾಲೂಕಿನ ತುಪ್ಪೂರು, ಅರಳಿಕೊಪ್ಪ, ಸಿಗಸೆ ಗ್ರಾಮಗಳ ಸುತ್ತಮುತ್ತ ನಿರಂತರವಾಗಿ ಕಾಡಾನೆಗಳು ದಾಳಿ ಇಡುತ್ತಿವೆ. ಅರಳಿ ಕೊಪ್ಪ ಗ್ರಾಮದ ಪೂರ್ಣೇಶ್ ಎಂಬುವರ ತೋಟದಲ್ಲಿ ದಾಂದಲೆ ನಡೆಸಿರುವ ಪುಂಡಾನೆಗಳು ನೂರಕ್ಕೂ ಹೆಚ್ಚು ಅಡಕೆ ಮರಗಳನ್ನು ನೆಲಸಮ ಮಾಡಿವೆ.
ಹೀಗಾಗಿ ಬೆಳೆಗಾರರು ಫಸಲನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ರಾತ್ರಿ ವೇಳೆ ದಾಳಿ ಇಡುತ್ತಿರುವ ಕಾಡಾನೆಗಳು ಅಡಿಕೆ ಮರಗಳನ್ನು ಬುಡ ಸಮೇತ ಉರುಳಿಸಿ ಸಿಗಿದು ಹಾಕಿವೆ. ಕಷ್ಟಪಟ್ಟು ಬೇಸಿಗೆಯಲ್ಲಿ ನೀರುಣಿಸಿದ್ದ ಮರಗಳ ಸ್ಥಿತಿಯನ್ನು ಕಂಡು ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಇಷ್ಟಾದರೂ ಸರ್ಕಾರ ನೀಡುವ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ ಅದು ಸರಿಯಾದ ಸಮಯಕ್ಕೆ ಸಿಗದೇ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಸರ್ಕಾರಗಳು ಇನ್ನಾದರೂ ಎಚ್ಚೆತ್ತು ಆನೆಗಳಿಗೆ ಕಡಿವಾಣ ಹಾಕುವ ಮಾರ್ಗೋಪಾಯಗಳನ್ನು ಹುಡುಕಬೇಕಿದೆ.
PublicNext
07/09/2025 03:45 pm