ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಮನೆ ಬಾಗಿಲಿಗೆ ಆಗಮಿಸಿದ ಪುಂಡಾನೆಗಳು

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಪುಂಡಾನೆಗಳ ಉಪಟಳ ದಿನೇದಿನೇ ಹೆಚ್ಚಾಗುತ್ತಿದ್ದು ಇಷ್ಟು ದಿನ ಕಾಫಿ ತೋಟ ಹಾಗೂ ಕಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಪುಂಡಾನೆಗಳು ಇದೀಗ ಮನೆ ಬಾಗಿಲಿಗೆ ಬರಲು ಆರಂಭಿಸಿವೆ. ಚಿಕ್ಕಮಗಳೂರು ತಾಲೂಕಿನ ಕಡಬಗೆರೆ ಗ್ರಾಮದಲ್ಲಿ ಎರಡು ಆನೆಗಳು ನಿತನ್ ಸಾಲ್ಡಾನ ಎಂಬುವರ ಮನೆ ಬಳಿಯೇ ಆಗಮಿಸಿದೆ. ಇದನ್ನು ಕಂಡ ಸುತ್ತಮುತ್ತಲಿನವರು ಶಬ್ದ ಮಾಡಿ ಆನೆಗಳನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಆದರೂ ಪುಂಡಾನೆಗಳು ತೋಟದಲ್ಲೇ ಗಂಟೆಗಳ ಕಾಲ ನಿಂತು ಆತಂಕ ಸೃಷ್ಟಿಸಿದವು. ಹೀಗಾಗಿ ಸ್ಥಳಿಯ ನಿವಾಸಿಗಳು ಪದೇ ಪದೇ ಈ ಭಾಗದಲ್ಲಿ ಕಾಡಾನೆ ಕಾಣಿಸುತ್ತಿದ್ದು ತಕ್ಷಣ ಅದನ್ನು ಸೆರೆಹಿಡಿದು ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು

Edited By : PublicNext Desk
Kshetra Samachara

Kshetra Samachara

06/09/2025 06:51 pm

Cinque Terre

1.84 K

Cinque Terre

0

ಸಂಬಂಧಿತ ಸುದ್ದಿ