", "articleSection": "Law and Order", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/419120_1757078463_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "9481623116" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಚಿಕ್ಕಮಗಳೂರು: ಬಸವನಹಳ್ಳಿ ಮುಖ್ಯ ರಸ್ತೆಯ ಓಂಕಾರೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿಯ ವಿಸರ್ಜನೆ ನಾಳೆ ನಡೆಯಲಿದ...Read more" } ", "keywords": "Node", "url": "https://dashboard.publicnext.com/node" }
ಚಿಕ್ಕಮಗಳೂರು: ಬಸವನಹಳ್ಳಿ ಮುಖ್ಯ ರಸ್ತೆಯ ಓಂಕಾರೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿಯ ವಿಸರ್ಜನೆ ನಾಳೆ ನಡೆಯಲಿದೆ ಇದಕ್ಕೆ ಹಾಗೂ ಇಂದು ತಡೆಯುತ್ತಿರುವ ಈದ್ ಮಿಲಾದ್ ಮೆರವಣಿಗೆಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಪೊಲೀಸ್ ಇಲಾಖೆ ಮಾಡಿಕೊಂಡಿದೆ ಎಂದು ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ ಮಾಹಿತಿ ನೀಡಿದ್ದಾರೆ.
ನಾಳೆ ಎಂ.ಜಿ ರಸ್ತೆಯಿಂದ ಆಜಾದ್ ಪಾರ್ಕ್ ವರೆಗೆ ನಾಳೆ ವಾರ ಸಂಚಾರ ಹಾಗೂ ನಿಲುಗಡೆಯನ್ನು ನಿಷೇಧಿಸಲಾಗಿದೆ. ಈದ್ ಮಿಲಾದ್ ಹಾಗೂ ಗಣೇಶೋತ್ಸವದ ಮೆರವಣಿಗೆಗಳು ದತ್ತ ಜಯಂತಿಯ ಮಾರ್ಗದಲ್ಲೇ ತೆರಳುವುದರಿಂದ ಈ ಪ್ರದೇಶಗಳು ಕೋಮು ಸೂಕ್ಷ್ಮವಾಗಿರುವುದರಿಂದ ಕಳೆದ ಬಾರಿಗಿಂತ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದ್ರು. 600 ಪೋಲಿಸ್ ಸಿಬ್ಬಂದಿ, 250 ಹೋಮ್ ಗಾರ್ಡ್ಸ್ ಗಳು, ನಾಲ್ಕು ಕೆಎಸ್ಆರ್‌ಪಿ ತುಕಡಿಗಳು, ಐದು ಡಿಎಆರ್ ತುಕಡಿಗಳು, ಒಂದು ಯು.ಆರ್.ಟಿ ತಂಡ ಹಾಗೂ ಡ್ರೋನ್ ಗಳು ಹೆಚ್ಚಿದ ನಿಗಾವಹಿಸಿವೆ. ಜೊತೆಗೆ ಹೆಚ್ಚಿದ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ. ಅಗತ್ಯ ಬಂದೋಬಸ್ತ್ ಕೈಗೊಳ್ಳಲು ಮಫ್ತಿ ತಂಡ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಇಬ್ಬರು ಡಿ.ವೈ ಎಸ್ಪಿ ಗಳು ಹಾಗೂ ಹತ್ತು ಇನ್ಸ್ಪೆಕ್ಟರ್ ಗಳು, 30 ಪಿಎಸ್ಐಗಳು ಭದ್ರತೆಯ ದೃಷ್ಟಿಯಿಂದ ನಿಯೋಜಿಸಲಾಗಿದೆ ಎಂದರು.
Kshetra Samachara
05/09/2025 06:51 pm