ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎನ್.ಆರ್ ಪುರ : ಬಾಳೆಹೊನ್ನೂರು ಪಟ್ಟಣದಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ

ಎನ್.ಆರ್ ಪುರ: ತಾಲೂಕಿನ ಬಾಳೆಹೊನ್ನೂರು ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾ ಮೆರವಣಿಗೆ ನಾಳೆ ನಡೆಯುವುದರಿಂದ ಪಟ್ಟಣದಲ್ಲಿ ವಾಹನ ನಿಲುಗಡೆ ಹಾಗೂ ಭಾರಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

ಸೆಪ್ಟೆಂಬರ್ 10 (ಬುಧವಾರ) ಬೆಳಿಗ್ಗೆ 8.00 ಗಂಟೆಯಿಂದ ಸೆಪ್ಟೆಂಬರ್ 11 (ಗುರುವಾರ) ಮಧ್ಯರಾತ್ರಿ 1.00 ಗಂಟೆಯವರೆಗೆ, ಬಾಳೆಹೊನ್ನೂರು ಪಟ್ಟಣದ ರಂಭಾಪುರಿ ಪೆಟ್ರೋಲ್ ಬಂಕ್‌ನಿಂದ ಪ್ರಕಾಶ್ ಸರ್ಕಲ್‌ವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಿದೆ. ನರಸಿಂಹರಾಜಪುರ ಹಾಗೂ ಜಯಪುರ-ಕೊಪ್ಪ ಮತ್ತು ಕಳಸ, ಚಿಕ್ಕಮಗಳೂರು ಕಡೆಯಿಂದ ಬಾಳೆಹೊನ್ನೂರು ಪಟ್ಟಣಕ್ಕೆ ಬರುವ ಎಲ್ಲಾ ರೀತಿಯ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶಿಸಿದ್ದಾರೆ.

Edited By : PublicNext Desk
PublicNext

PublicNext

09/09/2025 07:52 pm

Cinque Terre

7.15 K

Cinque Terre

0

ಸಂಬಂಧಿತ ಸುದ್ದಿ