ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಖಗ್ರಾಸ ಚಂದ್ರಗ್ರಹಣದ ಹಿನ್ನೆಲೆ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಿಗೆ ನೆರವೇರಿದ ನಿರಂತರ ಅಭಿಷೇಕ

ಚಿಕ್ಕಮಗಳೂರು: ಖಗ್ರಾಸ ಚಂದ್ರಗ್ರಹಣದ ವಿಶೇಷ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಹೊರನಾಡಿನ ಜಗನ್ಮಾತೆ ಅನ್ನಪೂರ್ಣೇಶ್ವರಿ ದೇವಿ ಹಾಗೂ ಶ್ರೀ ಉದ್ಭವ ಗಣಪತಿ ಸ್ವಾಮಿಗೆ ಭಕ್ತಿಭಾವಪೂರ್ಣವಾಗಿ ನಿರಂತರ ಅಭಿಷೇಕ ಸೇವೆ ನೆರವೇರಿಸಲಾಯಿತು.

ನಿನ್ನೆ ರಾತ್ರಿ ಚಂದ್ರಗ್ರಹಣ ಪ್ರಾರಂಭವಾದಾಗಿ ನಿಂದ ಮುಗಿಯುವವರೆಗೆ ನಿರಂತರ ಅಭಿಷೇಕ ಮತ್ತು ವೇದಮಂತ್ರೋಚ್ಚಾರಣೆಯೊಂದಿಗೆ ವಿಶೇಷ ಪೂಜಾ ವಿಧಿಗಳು ನಡೆದವು. ದೇವಸ್ಥಾನದಲ್ಲಿ ಗಂಗಾಜಲ, ಕಷಾಯ, ಹಾಲು, ತೆಂಗಿನಕಾಯಿ ನೀರು, ಚಂದನ ಹಾಗೂ ಪಂಚಾಮೃತದಿಂದ ಅಭಿಷೇಕ ನೆರವೇರಿಸಿದರು. ಭಕ್ತರು ದೇವಾಲಯದಲ್ಲಿ ಹಾಜರಿದ್ದು ಗ್ರಹಣ ಕಾಲದಲ್ಲಿ ಭಜನೆ, ಪಾರಾಯಣ ಮತ್ತು ಸ್ತೋತ್ರ ಪಠಣಗಳಲ್ಲಿ ತೊಡಗಿದರು.

ಈ ಸಂದರ್ಭದಲ್ಲಿ ಭಕ್ತರಿಗೆ ಪ್ರಸಾದ ಸೇವೆ ಇರಲಿಲ್ಲ. ಆದರೆ ಗ್ರಹಣ ಮುಗಿದ ನಂತರ ದೇವಿ ಹಾಗೂ ಗಣಪತಿಗೆ ಮಹಾ ಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.

Edited By : PublicNext Desk
PublicNext

PublicNext

08/09/2025 09:55 am

Cinque Terre

9.43 K

Cinque Terre

0

ಸಂಬಂಧಿತ ಸುದ್ದಿ