ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಗಣೇಶೋತ್ಸವ ಮೆರವಣಿಗೆಯಲ್ಲಿ ಹಣ್ಣು ಹಂಪಲು ಪಾನೀಯ ವಿತರಿಸಿದ ಮುಸ್ಲಿಂ ಯುವಕರು

ಚಿಕ್ಕಮಗಳೂರು: ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಬಿಡದಿ ಮನೆ ಗಣಪತಿ ವಿಸರ್ಜನೆ ಮೆರವಣಿಗೆ ಅದ್ದೂರಿಯಾಗಿ ನಡೆದಿದೆ.

ಈ ಸಂದರ್ಭದಲ್ಲಿ ಈ ವೇಳೆ ಸೌಹಾರ್ದಯುತ ದೃಶ್ಯ ಕಂಡು ಬಂತು. ಗಣೇಶೋತ್ಸವದ ಮೆರವಣಿಗೆ ಸಖರಾಯಪಟ್ಟಣ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ತಲುಪಿದಾಗ, ಸ್ಥಳೀಯ ಮುಸ್ಲಿಂ ಯುವಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಹಿಂದೂ ಭಕ್ತರಿಗೆ ನೀರು, ಬಿಸ್ಕೆಟ್ ಹಾಗೂ ಹಣ್ಣು-ಹಂಪಲುಗಳನ್ನು ವಿತರಿಸಿದರು. ಈ ಮೂಲಕ ಧಾರ್ಮಿಕ ಸೌಹಾರ್ದತೆ, ಸಹಬಾಳ್ವೆ ಹಾಗೂ ಬಾಂಧವ್ಯವನ್ನು ಜೀವಂತವಾಗಿ ಮೆರೆದರು. ಹಿಂದೂ-ಮುಸ್ಲಿಂ ಸಮುದಾಯಗಳು ಒಟ್ಟಾಗಿ ಸಂಭ್ರಮ ಹಂಚಿಕೊಂಡ ದೃಶ್ಯ ಸ್ಥಳೀಯರ ಮನಗೆದ್ದಿತು. ಗ್ರಾಮಸ್ಥರು ಈ ರೀತಿಯ ಸಹಾನುಭೂತಿ ಹಾಗೂ ಬಾಂಧವ್ಯತೆ ನಮ್ಮ ಸಮಾಜಕ್ಕೆ ಅಗತ್ಯ. ಧಾರ್ಮಿಕ ಹಬ್ಬಗಳು ಜನರನ್ನು ಬೇರ್ಪಡಿಸುವುದಕ್ಕಲ್ಲ, ಒಗ್ಗೂಡಿಸುವುದಕ್ಕೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Edited By : PublicNext Desk
Kshetra Samachara

Kshetra Samachara

06/09/2025 09:00 am

Cinque Terre

660

Cinque Terre

0

ಸಂಬಂಧಿತ ಸುದ್ದಿ