", "articleSection": "Astrology,News,Religion", "image": { "@type": "ImageObject", "url": "https://prod.cdn.publicnext.com/s3fs-public/421698-1757165125-020~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು: ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ನಾಳೆ ಅಂದರೆ ಭಾನುವಾರ ರಾತ್ರಿ 9.58ಕ್ಕೆ ಆರಂಭವಾಗಿ ಮಧ್ಯರಾತ್ರಿ 1.26ರವರೆಗೆ ಖಗ್ರಾಸ ಚಂದ್...Read more" } ", "keywords": "Chikkamagaluru,Total Lunar Eclipse,Dakshina Kashi Kalaseshwara,temple instructions,lunar eclipse notice,local news,Karnataka,astronomical event", "url": "https://dashboard.publicnext.com/node" } ಚಿಕ್ಕಮಗಳೂರು: ನಾಳೆ ಖಗ್ರಾಸ ಚಂದ್ರಗ್ರಹಣ - ದಕ್ಷಿಣ ಕಾಶಿ ಕಳಸೇಶ್ವರ ಸನ್ನಿಧಾನದಿಂದ ವಿಶೇಷ ಸೂಚನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ನಾಳೆ ಖಗ್ರಾಸ ಚಂದ್ರಗ್ರಹಣ - ದಕ್ಷಿಣ ಕಾಶಿ ಕಳಸೇಶ್ವರ ಸನ್ನಿಧಾನದಿಂದ ವಿಶೇಷ ಸೂಚನೆ

ಚಿಕ್ಕಮಗಳೂರು: ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ನಾಳೆ ಅಂದರೆ ಭಾನುವಾರ ರಾತ್ರಿ 9.58ಕ್ಕೆ ಆರಂಭವಾಗಿ ಮಧ್ಯರಾತ್ರಿ 1.26ರವರೆಗೆ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಈ ವಿದ್ಯಮಾನದಲ್ಲಿ ಬಿಳಿ ಬಣ್ಣದಲ್ಲಿರುವ ಚಂದ್ರನು ಕೆಂಪು ಬಣ್ಣದಲ್ಲಿ ಗೋಚರಿಸಲಿದ್ದಾನೆ. ಶ

ತಭಿಷಾ ನಕ್ಷತ್ರ ಕುಂಭ ರಾಶಿಯಲ್ಲಿ ಸಂಭವಿಸಲಿದೆ ಹೀಗಾಗಿ ಈ ರಾಶಿಯವರಿಗೆ ಅನಿಷ್ಟವಾಗಲಿದೆ ಎಂದು ದಕ್ಷಿಣ ಕಾಶಿ ಕಳಸೇಶ್ವರ ಸನ್ನಿಧಾನದ ಪ್ರಧಾನ ಅರ್ಚಕರಾದ ಅನಂತ್ ಭಟ್ ತಿಳಿಸಿದ್ದಾರೆ. ಕುಂಭ, ಮೀನಾ ಕರ್ಕಾಟಕ, ವೃಶ್ಚಿಕ ರಾಶಿಯವರೆಗೂ ಅನಿಷ್ಟವಾಗಲಿದೆ ಗ್ರಹಣದ ಮೂರು ಯಾಮಗಳಲ್ಲಿ ಅಂದರೆ 12.52ರ ನಂತರಆಹಾರ ಸೇವಿಸಬಾರದು. ಮಕ್ಕಳು, ವಯೋವೃದ್ಧರು, ರೋಗಿಗಳನ್ನು ಸೂರ್ಯಸ್ತದ ಮುನ್ನ ಆಹಾರವನ್ನು ಸೇವಿಸಬೇಕು.

ಗ್ರಾಮದ ಸಂದರ್ಭದಲ್ಲಿ ಚಂದ್ರಮಂಡಲವನ್ನು ರಾಹು ಸಂಪೂರ್ಣವಾಗಿ ಆವರಿಸುತ್ತಾನೆ. ಗ್ರಹಣ ಆರಂಭವಾದ ಬಳಿಕ ಸ್ನಾನ ಮಾಡಿ ಜಪ ದೇವರ ನಾಮವನ್ನು ಸ್ಮರಣೆ ಮಾಡಬೇಕು ಹಾಗೂ ಯಾರು ನಿದ್ರಿಸಬಾರದು. ಗ್ರಹಣ ಮೋಕ್ಷವಾದ ಬಳಿಕ ಸ್ನಾನ ಮಾಡಿ ಆಹಾರವನ್ನು ಸೇವಿಸಬಹುದು ಎಂದು ತಿಳಿಸಿದ್ದಾರೆ. ಇನ್ನು ಗ್ರಹಣದ ಪ್ರಯುಕ್ತ ಎಂದಿನಂತೆ ಪೂಜಾ ಕಾರ್ಯಗಳು ನಡೆಯುತ್ತವೆ.

ಗ್ರಹಣ ಆರಂಭವಾಗಿ ಮುಗಿಯುವವರೆಗೂ ನಿರಂತರವಾಗಿ ಅಭಿಷೇಕ ನಡೆಯುತ್ತಲೇ ಇರುತ್ತದೆ. ಅಭಿಷೇಕ ಮತ್ತು ಮಹಾ ಮಂಗಳಾರತಿ ನಡೆಯುತ್ತದೆ ಎಂದು ದಕ್ಷಿಣ ಕಾಶಿ ಕಳಸೇಶ್ವರ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಅನಂತ್ ಭಟ್ ತಿಳಿಸಿದ್ದಾರೆ.

Edited By : Suman K
Kshetra Samachara

Kshetra Samachara

06/09/2025 07:17 pm

Cinque Terre

1.06 K

Cinque Terre

0

ಸಂಬಂಧಿತ ಸುದ್ದಿ