", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/405356-1757246307-asti.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು: ಧರ್ಮಸ್ಥಳದ ವಿರುದ್ಧ ಬುರುಡೆ ಪ್ರಕರಣದ ಕುರಿತಂತೆ ಚಿಕ್ಕಮಗಳೂರಿನಲ್ಲಿ ನಿನ್ನೆ ನಡೆದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ...Read more" } ", "keywords": "Chikkamagaluru Burude case, Hindu Mahaganapati procession, accused given shoe beating, public humiliation, law and order, Karnataka news, public protest.", "url": "https://dashboard.publicnext.com/node" }
ಚಿಕ್ಕಮಗಳೂರು: ಧರ್ಮಸ್ಥಳದ ವಿರುದ್ಧ ಬುರುಡೆ ಪ್ರಕರಣದ ಕುರಿತಂತೆ ಚಿಕ್ಕಮಗಳೂರಿನಲ್ಲಿ ನಿನ್ನೆ ನಡೆದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ವಿಭಿನ್ನ ರೀತಿಯ ಅಸ್ಥಿಪಂಜರ ಗಮನ ಸೆಳೆಯಿತು.
ನಗರದ ಮುಖ್ಯ ಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿದ ಮೆರವಣಿಗೆಯಲ್ಲಿ, ಬುರುಡೆ ಪ್ರಕರಣದ ರೂವಾರಿಗಳಿಗೆ ಟಾಂಗ್ ನೀಡುವ ಉದ್ದೇಶದಿಂದ ನಕಲಿ ಬುರುಡೆ ಮತ್ತು ಅಸ್ಥಿಪಂಜರದ ಮಾದರಿಯ ಗೊಂಬೆಯನ್ನು ಪ್ರದರ್ಶನಗೊಳಿಸಲಾಯಿತು.
ಈ ಬಾರಿ ಗಣೇಶೋತ್ಸವಕ್ಕೆ ನಗರದ ಹನುಮಂತಪ್ಪ ವೃತ್ತದ ಬಳಿ ಧರ್ಮಸ್ಥಳದ ಮಹಾದ್ವಾರವನ್ನು ನಿರ್ಮಿಸಲಾಗಿತ್ತು. ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ಖಂಡನೆ ವ್ಯಕ್ತಪಡಿಸುವಂತೆಯೂ, ಸಂಪ್ರದಾಯ-ಸಂಸ್ಕೃತಿಗಳ ಗೌರವ ಕಾಪಾಡುವ ಸಂದೇಶವನ್ನೂ ಈ ಮಹಾದ್ವಾರ ಹರಡಿತು. ಧರ್ಮಸ್ಥಳದ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿರುವವರ ವಿರುದ್ಧ ಹೋರಾಡುವ ಸಂಕೇತವಾಗಿ ಮೆರವಣಿಗೆಯಲ್ಲಿ ಬುರುಡೆ ಗೊಂಬೆ ವಿಶೇಷ ಆಕರ್ಷಣೆಯಾಗಿತ್ತು.
PublicNext
07/09/2025 05:29 pm