ಚಿಕ್ಕಮಗಳೂರು : ಮಲೆನಾಡಿನ ಜೀವನ ಶೈಲಿಯನ್ನು ತನ್ನ ಕಾವ್ಯ-ಸಾಹಿತ್ಯದ ಮೂಲಕ ಇಡೀ ಜಗತ್ತಿಗೆ ತಲುಪಿಸಿದ ಲೇಖಕ, ಕವಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಜನ್ಮ ದಿನಾಚರಣೆಯ ಅಂಗವಾಗಿ, ತೇಜಸ್ವಿ @88 ಎಂಬ ವಿಶೇಷ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿರುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ನಾಳೆ (ಸೆಪ್ಟೆಂಬರ್ 8) ರಿಂದ ಆರಂಭವಾಗುವ ಈ ಎರಡು ದಿನಗಳ ಶಿಬಿರದಲ್ಲಿ ವ್ಯಂಗ್ಯ ಚಿತ್ರ, ಹಕ್ಕಿ-ಕೀಟ ಚಿತ್ರಕಲೆ ಹಾಗೂ ಕನ್ನಡ ಹಸ್ತಾಕ್ಷರಗಳ ಕಾರ್ಯಾಗಾರ ನಡೆಯಲಿದೆ. ಆಸಕ್ತ ಹಾಗೂ ಹವ್ಯಾಸಿ ಕಲಾವಿದರಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪ್ರತಿ ವರ್ಷ ತೇಜಸ್ವಿ ಪ್ರತಿಷ್ಠಾನ ತೇಜಸ್ವಿಯವರ ಸ್ಮರಣಾರ್ಥ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಬಾರಿ ಕೂಡ ಕಲಾತ್ಮಕ ಶಿಬಿರಗಳ ಮೂಲಕ ಅಭಿಮಾನಿಗಳ ಮನಸೆಳೆಯುತ್ತಿದೆ. ತೇಜಸ್ವಿಯವರ ಸಾಹಿತ್ಯ ಕೀರ್ತಿ ಹಾಗೂ ಮಲೆನಾಡಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಈ ವಿಶೇಷ ಕಾರ್ಯಕ್ರಮ ಯಶಸ್ವಿಯಾಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
Kshetra Samachara
07/09/2025 09:39 pm