ಬೆಂಗಳೂರು: ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ. ಹೊಟ್ಟೆ ನೋವೆಂದು ಶಿವಲಿಂಗ ನಗರದ ಮಲ್ಲೇಶ್ವಂನರಲ್ಲಿರುವ ಖಾಸಗಿ ಆಸ್ಪತ್ರೆಗೆ ಏಳು ದಿನಗಳ ಹಿಂದೆ ದಾಖಲಾಗಿದ್ರು. ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ರು. ಆಸ್ಪತ್ರೆಯವರು ನಿರ್ಲಕ್ಷ್ಯ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪ ಮಾಡಿದ್ದು, ನಾಲ್ಕು ಲಕ್ಷ ದುಡ್ಡು ಕಟ್ಟಿ ಶವ ತೆಗೆದುಕೊಂಡು ಹೋಗಿ ಎಂದು ವೈದ್ಯರು ಸೂಚಿಸಿರುವ ಆರೋಪ ಕೇಳಿ ಬಂದಿದೆ.
ಮೂರು ಲಕ್ಷ ಈಗಾಗಲೇ ಕಟ್ಟಲಾಗಿದೆ ಇನ್ನುಳಿದ ದುಡ್ಡು ಕಟ್ಟೋಕೆ ಸಾಧ್ಯವಿಲ್ಲ ಎಂದು ಪೋಷಕರು ಹೇಳಿದ್ದಾರೆ. ಬಾಕಿ ಒಂದು ಲಕ್ಷ ದುಡ್ಡು ಕಟ್ಟಿ ಅಂತ ಪಟ್ಟು ಹಿಡಿದ ಆಸ್ಪತ್ರೆ ವಿರುದ್ಧ ಪೋಷಕರು ಕೆಂಡವಾಗಿದ್ದು, ಪ್ರತಿಭಟನೆ ಮಾಡಿದ್ದಾರೆ. ಪರಿಣಾಮ ನಿನ್ನೆ ರಾತ್ರಿ ಆಸ್ಪತ್ರೆ ಬಳಿ ಹೈಡ್ರಾಮಾ ನಡೆದು ಹೋಗಿದೆ. ಕುಟುಂಬಸ್ಥರ ಹೋರಾಟದ ಬೆಂಬಲಕ್ಕೆ ಕರವೇ ಸ್ವಾಭಿಮಾನಿ ಸಂಘಟನೆಯ ನಿಂಗಗೌಡ ನಿಂತಿದ್ದು, ಪ್ರತಿಭಟನೆ ಮಾಡಿದ್ದಾರೆ.
PublicNext
09/09/2025 01:01 pm