", "articleSection": "Lifestyle,Business,Human Stories,News,LadiesCorner,Religion", "image": { "@type": "ImageObject", "url": "https://prod.cdn.publicnext.com/s3fs-public/421698-1757403266-07~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Ishtalinga" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ : ಗಣೇಶ ಚತುರ್ಥಿ ದಿನ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಮಾಸಿದ ಬಣ್ಣದ ಸೀರೆಯುಟ್ಟು ಗಣೇಶ ಮೂರ್ತಿ ಹೊತ್ತು ಹೊರಟ ವೃದ್ಧೆಗೆ ಬೆಳಗಾವಿ ವ್...Read more" } ", "keywords": "Hubli,businessman Shivaraj Marudi,elderly Girijavva Kambale,saree gift,social service,community gesture,local news,Hubballi,Karnataka", "url": "https://dashboard.publicnext.com/node" } ಹುಬ್ಬಳ್ಳಿ : ಉದ್ಯಮಿ ಶಿವರಾಜ್ ಮರುಡಿ ಅವರಿಂದ ವೃದ್ಧೆ ಗಿರಿಜವ್ವ ಕಾಂಬಳೆಗೆ ಸೀರೆ ಉಡುಗೊರೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಉದ್ಯಮಿ ಶಿವರಾಜ್ ಮರುಡಿ ಅವರಿಂದ ವೃದ್ಧೆ ಗಿರಿಜವ್ವ ಕಾಂಬಳೆಗೆ ಸೀರೆ ಉಡುಗೊರೆ

ಹುಬ್ಬಳ್ಳಿ : ಗಣೇಶ ಚತುರ್ಥಿ ದಿನ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಮಾಸಿದ ಬಣ್ಣದ ಸೀರೆಯುಟ್ಟು ಗಣೇಶ ಮೂರ್ತಿ ಹೊತ್ತು ಹೊರಟ ವೃದ್ಧೆಗೆ ಬೆಳಗಾವಿ ವ್ಯಾಪಾರಸ್ಥ ಶಿವರಾಜ್ ಮುರಡಿ ಹತ್ತಾರು ಸೀರೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಹೌದು ! ಹುಬ್ಬಳ್ಳಿ ತಾಲೂಕು ಮಂಟೂರ ಗ್ರಾಮದ ಗಿರಿಜವ್ವ ಕಾಂಬಳೆ ಎಂಬ ವೃದ್ಧೆ ಇತ್ತೀಚಿಗೆ ಗಣೇಶನ ಮೂರ್ತಿ ಹೊತ್ತು ಹೊರಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ‌ಹರಿದಾಡಿತ್ತು. ಬೆಳಗಾವಿ ಮರುಡಿ ಸೀರೆಗಳ ಹೋಲ್ ಸೇಲ್ ವ್ಯಾಪಾರಸ್ಥ ಶಿವರಾಜ್ ಮುರುಡಿ ಅಜ್ಜಿ ಮನೆಗೆ ಭೇಟಿ ನೀಡಿದ್ದಾರೆ.

ಅಜ್ಜಿಗೆ ಉಡಲು ಸೀರೆ, ದಿನಸಿ ಸಾಮಗ್ರಿಗಳನ್ನು ಉಡುಗೂರೆ ನೀಡಿದ್ದಾರೆ. ಶಿವರಾಜ್ ಮುರುಡಿಯವರು ಮೂಲತಃ ಸೀರೆ ವ್ಯಾಪಾರಿಯಾದರೂ ಸಹಿತ ಹಲವಾರು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಗುರುತಿಕೊಂಡಿದ್ದಾರೆ‌.

ಈಗ ಮಂಟೂರಿನ ಬಡ ಅಜ್ಜಿ ಮನೆಗೆ ಹೋಗಿ ಅವರಿಗೆ ಆರ್ಥಿಕ ಸಹಾಯದ ಜೊತೆಗೆ ಜೀವನ ಪೂರ್ತಿ ಎಷ್ಟು ಸೀರೆ ಬೇಕು ಅಷ್ಟು ಸೀರೆಗಳನ್ನು ನೀಡುವುದಾಗಿ ಹೇಳಿದ್ದಾರೆ.

ಬೆಳಗಾವಿಯ ಮುರುಡಿ ಸಾರೀ ಮಾಲೀಕರಾದ ಶಿವರಾಜ್ ಸಂಗಮೇಶ ಮುರುಡಿಯವರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಕೇಳಿ ಬರುತ್ತಿದೆ‌.ಇನ್ನೂ ಮುಂದಿನ ದಿನದಲ್ಲಿ ಶಿವರಾಜ್ ಮುರುಡಿಯವರ ಸಾಮಾಜಿಕ ಕಾರ್ಯ ಹೀಗೆ ಮುಂದುವರೆಯಲಿ ಎನ್ನುವುದು ಪಬ್ಲಿಕ್ ನೆಕ್ಸ್ಟ್ ಆಶಯ.....

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

09/09/2025 01:06 pm

Cinque Terre

31.36 K

Cinque Terre

5

ಸಂಬಂಧಿತ ಸುದ್ದಿ