ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ-ಧಾರವಾಡದಲ್ಲಿ ಹಿಟಾಚಿ ಅಭಿವೃದ್ಧಿ ಕೇಂದ್ರ ಸ್ಥಾಪನೆ : 2027ರೊಳಗೆ 200 ಎಂಜಿನಿಯರ್‌ಗಳಿಗೆ ಉದ್ಯೋಗ

ಬೆಂಗಳೂರು: ಹಿಟಾಚಿ ಕಂಪನಿಯು ಕರ್ನಾಟಕದಲ್ಲಿ ತನ್ನ ವಿಸ್ತರಣಾ ಯೋಜನೆ ಘೋಷಿಸಿದ್ದು, ಹುಬ್ಬಳ್ಳಿ-ಧಾರವಾಡದಲ್ಲಿ ಹೊಸ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುವುದಾಗಿ ಸಂಸ್ಥೆಯು ಅಧಿಕೃತವಾಗಿ ಪ್ರಕಟಿಸಿದೆ.

ಧಾರವಾಡ ಹಿಟಾಚಿ ಘಟಕವು ಈಗಾಗಲೇ ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಆಗ್ನೇಯ ಏಷ್ಯಾಕ್ಕೆ ಸೇವೆ ಸಲ್ಲಿಸುವ ಪ್ರಮುಖ ರಫ್ತು ಕೇಂದ್ರವಾಗಿದೆ. ಇದರ ಜೊತೆಗೆ, ಕಂಪನಿಯು ಹುಬ್ಬಳ್ಳಿ-ಧಾರವಾಡದಲ್ಲಿ ಜಾಗತಿಕ ಮಟ್ಟದ ಉತ್ಪನ್ನಗಳು ಮತ್ತು ಘಟಕಗಳನ್ನು ವಿನ್ಯಾಸಗೊಳಿಸುವತ್ತ ಗಮನ ಹರಿಸಿದ್ದು, “ಹಿಟಾಚಿ ಕನ್‌ಸ್ಟ್ರಕ್ಷನ್ ಮೆಷಿನರಿ ಡೆವಲಪ್ಮೆಂಟ್ ಸೆಂಟರ್” ಸ್ಥಾಪನೆಗೆ ಚಾಲನೆ ನೀಡಲಿದೆ.

ಈ ಕೇಂದ್ರವು 2027 ರೊಳಗೆ ಸುಮಾರು 200 ಎಂಜಿನಿಯರ್‌ಗಳನ್ನು ನೇಮಕ ಮಾಡುವ ಗುರಿ ಹೊಂದಿದ್ದು, ಬೆಂಗಳೂರಿನ ಆಚೆಗೂ ಕರ್ನಾಟಕದಲ್ಲಿ ಉದ್ಯಮ ಮತ್ತು ತಾಂತ್ರಿಕ ಶಕ್ತಿಯನ್ನು ತೋರಿಸುವ ಮಹತ್ವದ ಮೈಲಿಗಲ್ಲಾಗಿ ಹೊರಹೊಮ್ಮಲಿದೆ.

Edited By :
PublicNext

PublicNext

09/09/2025 07:47 pm

Cinque Terre

17.19 K

Cinque Terre

0

ಸಂಬಂಧಿತ ಸುದ್ದಿ