", "articleSection": "Politics,International", "image": { "@type": "ImageObject", "url": "https://prod.cdn.publicnext.com/s3fs-public/387839-1757470427-Untitled-design---2025-09-10T074731.801.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಕಾಠ್ಮಂಡು: ಹೊಸ ತಲೆಮಾರಿನ ಯುವಜನ (Gen Z) ದಂಗೆಯಿಂದಾಗಿ ರಾಜೀನಾಮೆ ನೀಡಿರುವ ನೆರೆಯ ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ಸ್ಥಾನಕ್ಕೆ ...Read more" } ", "keywords": "Nepal PM race, Balendra Shah, Balen Shah, Karnataka MTech graduate, Kathmandu Mayor, rapper turned politician,", "url": "https://dashboard.publicnext.com/node" }
ಕಾಠ್ಮಂಡು: ಹೊಸ ತಲೆಮಾರಿನ ಯುವಜನ (Gen Z) ದಂಗೆಯಿಂದಾಗಿ ರಾಜೀನಾಮೆ ನೀಡಿರುವ ನೆರೆಯ ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ಸ್ಥಾನಕ್ಕೆ ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಂಟೆಕ್ ಪದವೀಧರ, ರ್‍ಯಾಪರ್ ಮತ್ತು ಕಠ್ಮಂಡು ಮೇಯರ್ ಬಲೇಂದ್ರ ಶಾ ಹೆಸರು ಗಟ್ಟಿಯಾಗಿ ಕೇಳಿಬರುತ್ತಿದೆ.
35 ವರ್ಷದ ಬಲೇನ್‌ಗೆ ಯುವಜನರ ಭಾರೀ ಬೆಂಬಲ ವ್ಯಕ್ತವಾಗುತ್ತಿದ್ದು, “ಮುಂದಿನ ಪ್ರಧಾನಿ ಬಲೇನ್ ಆಗಬೇಕು, ಯುವಜನರ ಆಶೋತ್ತರಗಳನ್ನು ಈಡೇರಿಸುವ ಸಾಮರ್ಥ್ಯ ಅವರಿಗಷ್ಟೇ ಇದೆ” ಎಂಬ ಒತ್ತಾಯ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿದೆ. ಅವರ ಜತೆ ಸಂಸದೆ ಸುಮನಾ ಶ್ರೇಷ್ಠ ಹೆಸರೂ ಪಿಎಂ ರೇಸಲ್ಲಿದೆ.
ಕರ್ನಾಟಕದಲ್ಲಿ ಓದು:
1990ರಲ್ಲಿ ಜನಿಸಿದ ಬಲೇನ್ ಕಠ್ಮಂಡುವಿನಲ್ಲಿ ಎಂಜಿನಿಯರಿಂಗ್ ಓದಿ, ಬಳಿಕ ಕರ್ನಾಟಕದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್ ಪದವಿ ಪಡೆದಿದ್ದಾರೆ. ರಾಜಕೀಯಕ್ಕೆ ಮುನ್ನ ಅವರು ನೇಪಾಳದ ಭೂಗತ ಹಿಪ್ ಹಾಪ್ ಕ್ಷೇತ್ರದಲ್ಲಿ ರ್ಯಾಪರ್ ಹಾಗೂ ಸಾಹಿತಿಯಾಗಿ ಹೆಸರು ಮಾಡಿದ್ದರು. 2022ರ ಕಾಠ್ಮಂಡು ಮೇಯರ್ ಚುನಾವಣೆಯಲ್ಲಿ ಸಿಪಿಎನ್ (ಯುಎಂಎಲ್) ಅಭ್ಯರ್ಥಿ ವಿರುದ್ಧ 61,000 ಮತಗಳ ಅಂತರದಿಂದ ಗೆದ್ದಿದ್ದರು. ನೇಪಾಳಿ ರ್ಯಾಪ್ ಬ್ಯಾಟಲ್ ಲೀಗ್‌ನ ಎರಡನೇ ಆವೃತ್ತಿಯ ವಿಜೇತರಾಗಿಯೂ ಗುರುತಿಸಿಕೊಂಡಿದ್ದಾರೆ.
ಆದಿಪುರುಷ್ ವಿವಾದ:
ಪ್ರಭಾಸ್ ನಟನೆಯ ಆದಿಪುರುಷ್ ಚಿತ್ರದಲ್ಲಿ "ಸೀತೆ ಭಾರತದ ಮಗಳು" ಎಂಬ ಡೈಲಾಗ್ ವಿರುದ್ಧ ಬಲೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪದ ಬದಲಿಸದಿದ್ದರೆ ಭಾರತೀಯ ಚಿತ್ರಗಳನ್ನೇ ನೇಪಾಳದಲ್ಲಿ ನಿಷೇಧಿಸುವ ಎಚ್ಚರಿಕೆ ನೀಡಿದ್ದರು. ಬಳಿಕ ಆ ಡೈಲಾಗ್ ಎಡಿಟ್ ಮಾಡಿ ಚಿತ್ರ ಪ್ರದರ್ಶಿಸಲಾಯಿತು.
ರಾಜಕೀಯ ಪ್ರವೇಶ:
2015ರ ಭೂಕಂಪ ಮತ್ತು ಭಾರತ ಹೇರಿದ್ದ ನಿರ್ಬಂಧದ ನಂತರ ರಾಜಕೀಯಕ್ಕೆ ಕಾಲಿಟ್ಟ ಬಲೇನ್, ಇಂದು ನೇಪಾಳದ ಯುವಜನತೆಗೆ ಆಶಾಕಿರಣವಾಗಿ ಗೋಚರಿಸುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ 1.41 ಲಕ್ಷ, ಯೂಟ್ಯೂಬ್‌ನಲ್ಲಿ 3.28 ಲಕ್ಷ ಮತ್ತು ಇನ್‌ಸ್ಟಾಗ್ರಾಂನಲ್ಲಿ 1.23 ಲಕ್ಷ ಫಾಲೋವರ್ಸ್ ಹೊಂದಿರುವ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯರಾಗಿದ್ದಾರೆ.
ಜೈಲಿನಿಂದ ಮಾಜಿ ಡಿಪ್ಯುಟಿ ಪಿಎಂ ಬಿಡುಗಡೆ:
ಇದೇ ವೇಳೆ, ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ, ಪ್ರತಿಭಟನಾಕಾರರು ಜೈಲಿಗೆ ನುಗ್ಗಿ ಮಾಜಿ ಉಪಪ್ರಧಾನಿ ಹಾಗೂ ರಾಷ್ಟ್ರೀಯ ಸ್ವತಂತ್ರ ಪಕ್ಷದ ಅಧ್ಯಕ್ಷ ರಬಿ ಲಾಮಿಚಾನೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭ ಕನಿಷ್ಠ 1,500 ಕೈದಿಗಳು ಕೂಡ ಜೈಲಿನಿಂದ ಪರಾರಿಯಾಗಿದ್ದಾರೆ.
ಲಾಮಿಚಾನೆ ಭ್ರಷ್ಟಾಚಾರದಿಂದ ದೂರ ಇದ್ದು, ತಮ್ಮ ಪ್ರಾಮಾಣಿಕ ವ್ಯಕ್ತಿತ್ವದಿಂದ ಜನರ ವಿಶ್ವಾಸ ಗಳಿಸಿರುವ ಕಾರಣ, ಓಲಿ ಸರ್ಕಾರದ ವಿರುದ್ಧ ಬೇಸತ್ತಿರುವ ನೇಪಾಳದ ಜನತೆಗೆ ಹೊಸ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
PublicNext
10/09/2025 07:43 am