", "articleSection": "Infrastructure,International", "image": { "@type": "ImageObject", "url": "https://prod.cdn.publicnext.com/s3fs-public/286525-1757438213-HU.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚೀನಾಕ್ಕೆ ಹೋಲಿಸಿದ್ರೆ ಅಭಿವೃದ್ಧಿ, ಜೀವನ ಮಟ್ಟ, ಮೂಲ ಸೌಕರ್ಯಗಳ ವಿಚಾರದಲ್ಲಿ ಭಾರತ ತುಂಬಾ ಹಿಂದೆಬಿದ್ದಿದೆ. ಚೀನಾ ಇತ್ತೀಚೆಗೆ ಲೋಕಾರ್ಪಣೆಗೊಳಿ...Read more" } ", "keywords": "India Tier 2 city, Hubli-Dharwad comparison, China Tier 3 city, economic growth, urban development, city classification, infrastructure, population, business opportunities, India vs China cities, urbanization", "url": "https://dashboard.publicnext.com/node" }
ಚೀನಾಕ್ಕೆ ಹೋಲಿಸಿದ್ರೆ ಅಭಿವೃದ್ಧಿ, ಜೀವನ ಮಟ್ಟ, ಮೂಲ ಸೌಕರ್ಯಗಳ ವಿಚಾರದಲ್ಲಿ ಭಾರತ ತುಂಬಾ ಹಿಂದೆಬಿದ್ದಿದೆ. ಚೀನಾ ಇತ್ತೀಚೆಗೆ ಲೋಕಾರ್ಪಣೆಗೊಳಿಸಿದ ಗುಯಿಯಾಂಗ್ ನಗರವು ಇದಕ್ಕೆ ನಿದರ್ಶನ ಎಂದರೆ ತಪ್ಪಾಗದು. ನಿಜಾ ಕಣ್ರೀ... ಗಗನ ಚುಂಬಿ ಕಟ್ಟಡಗಳು, ರಸ್ತೆ ವ್ಯವಸ್ಥೆ, 121 ಮೀಟರ್ ಎತ್ತರದ ಕಟ್ಟಡದಿಂದ ಬೀಳುವ ಜಲಪಾತ ಆಹಾಹಾ... ಇಷ್ಟೊಂದು ಅದ್ಭುತ ಪ್ಲಾನ್ ಹೊಂದಿರುವ ಈ ನಗರಕ್ಕೆ ಚೀನಾ ಟೈರ್ 3 ಸಿಟಿ ಅಂತ ಹೇಳುತ್ತೆ. ಟೈರ್ ಸಿಟಿ ಅಂದ್ರೆ ನಗರಗಳ ಜನಸಂಖ್ಯೆ, ಮೂಲಸೌಕರ್ಯ ಮತ್ತು ಆರ್ಥಿಕ ಬೆಳವಣಿಗೆಯ ಆಧಾರದ ಮೇಲೆ ಕೊಡುವ ಶ್ರೇಣಿಯಾಗಿದೆ. ಭಾರತದಲ್ಲಿ ದೆಹಲಿ ಮತ್ತು ಮುಂಬೈ ಶ್ರೇಣಿ 1 ನಗರಗಳಾಗಿದ್ದರೆ, ಸ್ಮಾರ್ಟ್ ಸಿಟಿ ಕನಸಿನಲ್ಲಿ ಮುಳುಗಿರುವ ನಮ್ಮ ಹುಬ್ಬಳ್ಳಿ ಭಾರತದ ಟೈರ್ 2 ಸಿಟಿ..!
ಫುಲ್ ಶಾಕ್ ಆದ್ರಿ ಅಲ್ವಾ...! ಟೈರ್ 3 ಸಿಟಿ ಗುಯಿಯಾಂಗ್ ಗಿಂತ ಒಂದು ಶ್ರೇಣಿ ಮುಂದಿರುವ ಹುಬ್ಬಳ್ಳಿಯ ಪ್ಲಾನ್‌ಗಳ ಬಗ್ಗೆ ಜನ ಬೇಸತ್ತು ಹೋಗಿದ್ದಾರೆ. ಚೀನಾದ ಕಟ್ಟಗಡೆಯ ಶ್ರೇಣಿಯ ನಗರಕ್ಕೂ ನಮ್ಮ ಹುಬ್ಬಳ್ಳಿಯನ್ನು ಹೋಲಿಸಲು ಸಾಧ್ಯವಿಲ್ಲ ಎಂದರೆ ತಪ್ಪಾಗದು. ನಮ್ಮ ದೇಶದಲ್ಲಿ ಬಹಳ ವರ್ಷಗಳಿಂದ ಇರೋ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಬೂಟಾಟಿಕೆಯ ಫಲವಾಗಿ ಹುಬ್ಬಳ್ಳಿ ಅಷ್ಟೇ ಯಾಕೆ ದೇಶ ಬಹುತೇಕ ನಗರಗಳು ಇನ್ನೂ ಮುಲಭೂತ ಸೌಲಭ್ಯ ಇಲ್ಲದೆ ವಂಚಿತವಾಗಿವೆ. ಇನ್ನಾದರೂ ಸರ್ಕಾರಗಳು ಭ್ರಷ್ಟರನ್ನು ದೂರವಿಟ್ಟು ಅಭಿವೃದ್ಧಿಯತ್ತ ಹೆಜ್ಜೆ ಇಡಬೇಕಿದೆ.
PublicNext
09/09/2025 10:47 pm